ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ರಧಾನಿ ಮೋದಿ ನಿದ್ದೆ ಮಾಡುವ ಫೋಟೊವನ್ನು ಸಿದ್ದರಾಮಯ್ಯ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದು, ಪ್ರಧಾನಿಯ ಗಾಢ ನಿದ್ದೆ, ಕರ್ನಾಟಕದ ಪ್ರಮುಖ ಅಭಿವೃದ್ಧಿಗೆ ತೊಂದ್ರೆ ಎನ್ನುವಂಥ ಕ್ಯಾಪ್ಷನ್ ಹಾಕಿದ್ದರು.
ಇದಕ್ಕೆ ವಿಪಕ್ಷ ನಾಯಕ ಆರ್ ಅಶೋಕ್ ಈ ಬಗ್ಗೆ ಮಾತನಾಡಿದ್ದಾರೆ. ನಿದ್ದೆ ಅನ್ನೋದು ಬ್ರ್ಯಾಂಡ್ ಆಗೋದ್ರೆ ಅದಕ್ಕೆ ಸಿದ್ದರಾಮಯ್ಯನವರೇ ಅಂಬಾಸಿಡರ್. ಪ್ರಧಾನಿ ಯಾವ ಕಾರ್ಯಕ್ರಮದಲ್ಲಿ ಮಲಗಿದ್ದಾರೆ? ಒಂದಾದ್ರೂ ಪ್ರೂಫ್ ಇದೆಯಾ? ಇದ್ರೆ ಕೊಟ್ಬಿಡಿ! ಸಿದ್ದರಾಮಯ್ಯ ಎಲ್ಲಾದ್ರೂ ನಿದ್ದೆ ಮಾಡಿದ್ದಾರಾ? ಖಂಡಿತಾ ಅದಕ್ಕೆ ಸಾಕಷ್ಟು ದಾಖಲೆ ಇದೆ ಎಂದು ಹೇಳಿದ್ದಾರೆ.
ಎದ್ದೇಳಿ ಸಿದ್ರಾಮಣ್ಣ, ನಿದ್ರಾಮಣ್ಣ ಎಂದು ಎಷ್ಟು ಮಂದಿ ಕಾಲು ಎಳೆದಿಲ್ಲ. ಅಭಿವೃದ್ಧಿಗೆ ತಮ್ಮ ಜೀವನವನ್ನೇ ಮೀಸಲಿಟ್ಟ ವ್ಯಕ್ತಿ ನಿದ್ದೆ ಮಾಡ್ತಾರೆ ಅಂದ್ರೆ ನಂಬೋ ಮಾತಲ್ಲ ಎಂದು ಹೇಳಿದ್ದಾರೆ.