ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟಿ ಪ್ರೇಮಾ ಮದುವೆ, ಪ್ರೀತಿ ಆಸೆ ತೊರೆದು ಆಶ್ರಮಕ್ಕೆ ಸೇರಿದ್ದಾರೆ ಎನ್ನುವ ಸುದ್ದಿ ಎಲ್ಲೆಡೆ ವೈರಲ್ ಆಗುತ್ತಿದ್ದಂತೆಯೇ ಈ ರೂಮರ‍್ಸ್‌ಗೆ ಪ್ರೇಮಾ ಬ್ರೇಕ್ ಹಾಕಿದ್ದಾರೆ.
ಸಂದರ್ಶನವೊಂದರಲ್ಲಿ ಈ ಬಗ್ಗೆ ಮಾತನಾಡಿದ್ದು, ನಾನು ಯಾವ ಆಶ್ರಮವನ್ನೂ ಸೇರಿಲ್ಲ. ಓಶೋ ಆಶ್ರಮದಲ್ಲಿ ನಾಲ್ಕು ದಿನದ ಶಿಬಿರ ಅಟೆಂಡ್ ಮಾಡಿದ್ದೆ ಅಷ್ಟೆ ಎಂದಿದ್ದಾರೆ.
ಡಿಪ್ರೆಶನ್‌ಗೆ ಜಾರಿದ ವಿಷಯವನ್ನು ಒಪ್ಪಿಕೊಳ್ತೀನಿ, ನನಗೆ ಗರ್ಭಪಾತವಾಗಿದ್ದು, ಹೆಣ್ಣು ಮಗು ಜನಿಸಬೇಕಿತ್ತು. ಸಹಜವಾಗಿ ಎಲ್ಲ ತಾಯಿಗೂ ಆಗುವ ನೋವು ನನಗೂ ಆಗಿತ್ತು. ಹೆಚ್ಚು ಕೊರಗಿ ಡಿಪ್ರೆಶನ್‌ಗೆ ಜಾರಿದ್ದೆ. ಅದರಿಂದ ಹೊರಬರೋಕೆ ಸಾಕಷ್ಟು ಪ್ರಯತ್ನ ಪಟ್ಟೆ. ಇದಾದ ನಂತರ ಸ್ನೇಹಿತರು ಯೋಗ ಧ್ಯಾನ ಮಾಡಲು ಸೂಚಿಸಿದರು.
ಅದರಂತೆ ಧ್ಯಾನ ಮಾಡಲು ಓಶೋ ಆಶ್ರಮಕ್ಕೆ ಹೋಗಿದ್ದೆ. ಮನೆಗೆ ಬಂದು ಧ್ಯಾನ ರೂಢಿ ಮಾಡಿಕೊಂಡಿದ್ದೇನೆ. ಸುಳ್ಳು ಸುದ್ದಿಗಳು ಹಬ್ಬದಂತೆ ನೋಡಿಕೊಳ್ಳೋದು ತುಂಬಾನೇ ಕಷ್ಟ ಎಂದಿದ್ದಾರೆ.