ಸ್ಲೋ ಓವರ್ ರೇಟ್​: ಟೀಂ ಇಂಡಿಯಾ ಆಟಗಾರರಿಗೆ ಐಸಿಸಿಯಿಂದ ಬಿತ್ತು ದಂಡ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸ್ಲೋ ಓವರ್ ರೇಟ್​ನಿಂದಾಗಿ ಟೀಂ ಇಂಡಿಯಾಕ್ಕೆ ಐಸಿಸಿ ದಂಡ ವಿಧಿಸಿದೆ. ಹೈದರಾಬಾದ್​ನಲ್ಲಿ ನಡೆದ ಮೊದಲ ಏಕದಿನ ಪಂದ್ಯಕ್ಕೆದಲ್ಲಿ ರೋಹಿತ್ (Rohit Sharma) ಬಳಗ ನಿಗಧಿತ ಸಮಯಕ್ಕೆ ಓವರ್ ಮುಗಿಸದ ಕಾರಣ ಈ ದಂಡ ಹಾಕಲಾಗಿದೆ.

ನಿಗದಿತ ಸಮಯಕ್ಕೆ 3 ಓವರ್ ಕಡಿಮೆ ಬೌಲಿಂಗ್ ಮಾಡಿದ್ದು, ಈ ಹಿನ್ನೆಲೆಯಲ್ಲಿ ಕ್ರಮ ಕೈಗೊಳ್ಳಲಾಗಿದೆ. ಐಸಿಸಿ ನೀತಿ ಸಂಹಿತೆಯ (ICC Code of Conduct) ಕಲಂ 2.22ರ ಅಡಿಯಲ್ಲಿ ಭಾರತ ತಂಡಕ್ಕೆ ದಂಡ ವಿಧಿಸಲಾಗಿದೆ.
ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಅವರ ಪಂದ್ಯ ಶುಲ್ಕ ಶೇ.60ರಷ್ಟು ಕಡಿತವಾಗಲಿದೆ. ಅದೇ ಸಮಯದಲ್ಲಿ, ಉಳಿದ ಆಟಗಾರರ ಪಂದ್ಯದ ಶುಲ್ಕದಿಂದ ಶೇಕಡಾ 20 ರಷ್ಟು ಮೊತ್ತವನ್ನು ಕಡಿತಗೊಳಿಸಲಾಗುತ್ತದೆ.

ಹೈದರಾಬಾದ್‌ನಲ್ಲಿ ಮೊದಲ ಏಕದಿನ ಪಂದ್ಯ ಮುಗಿದಾಗ ಟೀಂ ಇಂಡಿಯಾ ನಿಗದಿತ ಸಮಯದಲ್ಲಿ 3 ಓವರ್ ಕಡಿಮೆ ಬೌಲ್ ಮಾಡಿರುವುದರ ಬಗ್ಗೆ ಮ್ಯಾಚ್ ರೆಫರಿ ಜಾವಗಲ್ ಶ್ರೀನಾಥ್ ಐಸಿಸಿ ಗಮನಕ್ಕೆ ತಂದ ಬಳಿಕ ದಂಡ ವಿಧಿಸಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!