SHOCKING| ಸಣ್ಣ ವಿಮಾನ ಪತನ: ಐವರ ಸಾವು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಪೋಲೆಂಡ್‌ನ ವಾರ್ಸಾ ಬಳಿಯ ಏರ್‌ಫೀಲ್ಡ್‌ನಲ್ಲಿ ಸಣ್ಣ ವಿಮಾನವೊಂದು ಹ್ಯಾಂಗರ್‌ಗೆ ಅಪ್ಪಳಿಸಿದ ಪರಿಣಾಮ ವಿಮಾನ ಪತನಗೊಂಡಿದ್ದು, ಐವರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ದುರಂತದಲ್ಲಿ ಕನಿಷ್ಠ ಏಳು ಜನರು ಗಾಯಗೊಂಡಿರುವುದಾಗಿ ಪೋಲೆಂಡ್‌ನ ಆರೋಗ್ಯ ಸಚಿವ ಆಡಮ್ ನೀಡ್ಜಿಲ್ಸ್ಕಿ ಟ್ವಿಟರ್‌ನಲ್ಲಿ ತಿಳಿಸಿದ್ದಾರೆ.

ನಾಲ್ಕು ಹೆಲಿಕಾಪ್ಟರ್‌ಗಳು ಮತ್ತು 10 ಆಂಬ್ಯುಲೆನ್ಸ್‌ಗಳನ್ನು ವಾರ್ಸಾದಿಂದ 47 ಕಿಲೋಮೀಟರ್ ದೂರದಲ್ಲಿರುವ ಕ್ರಿಸಿನ್ನೊ ಗ್ರಾಮದಲ್ಲಿ ಅಪಘಾತದ ಸ್ಥಳಕ್ಕೆ ಕಳಿಸಲಾಗಿದೆ. ಕ್ರಿಸಿನೊದಲ್ಲಿನ ಏರ್‌ಫೀಲ್ಡ್‌ನಲ್ಲಿ ಈ ಘಟನೆ ನಡೆದಿದ್ದು, ಸ್ಥಳೀಯ ಅಗ್ನಿಶಾಮಕ ಇಲಾಖೆಯು ವಿಮಾನದ ಬಾಲವು ಹ್ಯಾಂಗರ್‌ನಿಂದ ಹೊರಕ್ಕೆ ಚಾಚಿದ ಫೋಟೋವನ್ನು ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದೆ. ಪತನಗೊಂಡ ವಿಮಾನವು ಸೆಸ್ನಾ 208 ಎಂದು ಪೋಲಿಷ್ ಮಾಧ್ಯಮಗಳು ತಿಳಿಸಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!