ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಣ್ಣ ವಿಮಾನ ಪತನವಾಗಿ, ಅಪಘಾತದಲ್ಲಿ ಮೂವರು ಸಾವನ್ನಪ್ಪಿರುವ ಘಟನೆ ಕ್ಯಾಲಿಫೋರ್ನಿಯಾದಲ್ಲಿ ನಡೆದಿದೆ. ದಕ್ಷಿಣ ಕ್ಯಾಲಿಫೋರ್ನಿಯಾ ವಿಮಾನ ನಿಲ್ದಾಣದಲ್ಲಿ ಸಿಂಗಲ್ ಇಂಜಿನ್ ವಿಮಾನವು ಹ್ಯಾಂಗರ್‌ಗೆ ಅಪ್ಪಳಿಸಿ ಬೆಂಕಿಗೆ ಆಹುತಿಯಾಗಿದ್ದು, ಪೈಲಟ್ ಮತ್ತು ಇಬ್ಬರು ಪ್ರಯಾಣಿಕರು ಸಾವನ್ನಪ್ಪಿದ್ದಾರೆ ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ಖಚಿತಪಡಿಸಿದರು.
ಅಪ್‌ಲ್ಯಾಂಡ್‌ನ ಕೇಬಲ್ ವಿಮಾನ ನಿಲ್ದಾಣದಲ್ಲಿ ಮೂರು ಜನರನ್ನು ಹೊತ್ತೊಯ್ಯುತ್ತಿದ್ದ ಬೀಚ್‌ಕ್ರಾಫ್ಟ್ ಪಿ 35, ಟೇಕಾಫ್ ಮಾಡುವಾಗ ಬೆಳಿಗ್ಗೆ 6:30ಕ್ಕೆ ಅಪಘಾತಕ್ಕೀಡಾಯಿತು ಎಂದು ಫೆಡರಲ್ ಏವಿಯೇಷನ್ ಅಥಾರಿಟಿ ತಿಳಿಸಿದೆ. ಸ್ಯಾನ್ ಬರ್ನಾರ್ಡಿನೋ ಕೌಂಟಿ ಅಗ್ನಿಶಾಮಕ ಸಿಬ್ಬಂದಿ ಬೆಂಕಿಯನ್ನು ನಂದಿಸಿದರು.
ಈ ಘಟನೆಯು ಡೌನ್‌ಟೌನ್ ಲಾಸ್ ಏಂಜಲೀಸ್‌ನಿಂದ ಪೂರ್ವಕ್ಕೆ 65 ಕಿಲೋಮೀಟರ್ ದೂರದಲ್ಲಿ ಸಂಭವಿಸಿದೆ ಎಂದು ಅಪ್‌ಲ್ಯಾಂಡ್ ಪೊಲೀಸರು ಹೇಳಿಕೆಯಲ್ಲಿ ತಿಳಿಸಿದ್ದಾರೆ. FAA ರಾಷ್ಟ್ರೀಯ ಸಾರಿಗೆ ಸುರಕ್ಷತಾ ಮಂಡಳಿಯು ಅಪಘಾತದ ಬಗ್ಗೆ ತನಿಖೆ ನಡೆಸುತ್ತಿದೆ.