ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದಲ್ಲಿ ಹೊಸ ಹಾಗೂ ತಾತ್ಕಾಲಿಕ ವಿದ್ಯುತ್ ಸಂಪರ್ಕಗಳಿಗೆ ಸ್ಮಾರ್ಟ್ ಮೀಟರ್ ವ್ಯವಸ್ಥೆ ಕಡ್ಡಾಯಗೊಳಿಸಲಾಗಿದೆ ಎಂದು ಇಂಧನ ಸಚಿವ ಕೆ.ಜೆ. ಜಾರ್ಜ್ ಬುಧವಾರ ತಿಳಿಸಿದರು.
ಕೇಂದ್ರ ಇಂಧನ ಸಚಿವರನ್ನು ಭೇಟಿ ಮಾಡಿದಾಗಲೂ ಸ್ಮಾರ್ಟ್ ಮೀಟರ್ ಅಳವಡಿಸಲು ಸೂಚಿಸಿದರು .ಸ್ಮಾರ್ಟ್ ಮೀಟರ್ ಪೂರೈಕೆಗೆ ಬೆಸ್ಕಾಂನವರು ಟೆಂಡರ್ ಕರೆದಿದ್ದಾರೆ. ಮೂರು ಪಾರ್ಟ್ ಟೆಂಡರ್ ಕರೆದಿದ್ದಾರೆ. ಒಬ್ಬರು ಸ್ಮಾರ್ಟ್ ಮೀಟರ್ ಅಳವಡಿಸುತ್ತಾರೆ. ಸಿಮ್ ಕಾರ್ಡ್ ಹಾಕುವವರು ಬೇರೆ ಇರ್ತಾರೆ. ಟೆಂಡರ್ ಕೊಟ್ಟಿದ್ರಲ್ಲಿ ತಪ್ಪಾಗಿದ್ರೆ ತಡೆಯುತ್ತೇವೆ ಎಂದು ಹೇಳಿದರು.
ರಾಜ್ಯದಲ್ಲಿ ಕಪ್ಪು ಪಟ್ಟಿಗೆ ಸೇರಿದ ಕಂಪನಿಗಳು ಸ್ಮಾರ್ಟ್ ವಿದ್ಯುತ್ ಮೀಟರ್ ಪೂರೈಕೆ ಮಾಡುತ್ತಿವೆ ಎಂಬ ಬಿಜೆಪಿ ಶಾಸಕ ಅಶ್ವತ್ಥ ನಾರಾಯಣ್ ಅವರ ಆರೋಪವನ್ನು ತಳ್ಳಿಹಾಕಿದ ಕೆಜೆ ಜಾರ್ಜ್, ಇದು ಸಂಪೂರ್ಣ ತಪ್ಪು. ಮೀಟರ್ ಪೂರೈಕೆ ಮಾಡುತ್ತಿರುವ ಕಂಪನಿಗಳು ಕಪ್ಪು ಪಟ್ಟಿಯಲ್ಲಿ ಇಲ್ಲ ಎಂದರು.