Friday, November 28, 2025

SMAT: ದುಬೆ-ಶುಭಾಂಗ್ ಅಬ್ಬರದ ಆಟ: ಕರ್ನಾಟಕಕ್ಕೆ ರೋಚಕ ಜಯ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿಯ ಪಂದ್ಯದಲ್ಲಿ ಕರ್ನಾಟಕ ತಂಡ ಉತ್ತರಾಖಂಡ ವಿರುದ್ಧ 5 ವಿಕೆಟ್‌ಗಳ ಅಂತರದಿಂದ ರೋಚಕ ಜಯ ಸಾಧಿಸಿದೆ. ಅಹಮದಾಬಾದ್‌ನಲ್ಲಿ ನಡೆದ ಈ ಪಂದ್ಯದಲ್ಲಿ 198 ರನ್‌ಗಳ ಗುರಿಯನ್ನು ಕರ್ನಾಟಕ ಕೊನೆಯ ಎಸೆತದಲ್ಲಿ ಬೆನ್ನಟ್ಟಿ ಗೆದ್ದಿತು.

ಮೊದಲು ಬ್ಯಾಟಿಂಗ್ ಮಾಡಿದ ಉತ್ತರಾಖಂಡ 20 ಓವರ್‌ಗಳಲ್ಲಿ 197 ರನ್‌ಗಳಿಗೆ 5 ವಿಕೆಟ್‌ ಕಳೆದುಕೊಂಡಿತು. ಕುನಾಲ್ ಚಂಡೇಲಾ 88 ರನ್, ಅಂಜನೇಯ ಸೂರ್ಯವಂಶಿ 54 ರನ್‌ಗಳಿಸಿ ತಂಡಕ್ಕೆ ನೆರವಾದರು. ಕರ್ನಾಟಕದ ಪರ ವಿದ್ವತ್ ಕಾವೇರಪ್ಪ 3 ವಿಕೆಟ್ ಪಡೆದರು.

ಚೇಸಿಂಗ್ ವೇಳೆ ಆರಂಭಿಕ ಆಘಾತ ಎದುರಿಸಿದ ಕರ್ನಾಟಕಕ್ಕೆ ಸ್ಮರಣ್ ರವಿಚಂದ್ರನ್ 67 ರನ್‌ಗಳಿಸಿ ಆಸರೆಯಾದರು. ಕೊನೆಯಲ್ಲಿ ಪ್ರವೀಣ್ ದುಬೆ 38 ಮತ್ತು ಶುಭಾಂಗ್ ಹೆಗ್ಡೆ 29 ರನ್‌ಗಳೊಂದಿಗೆ ತಂಡಕ್ಕೆ ಗೆಲುವಿನ ದಾರಿ ತೋರಿಸಿದರು.

error: Content is protected !!