ಹೊಸದಿಗಂತ ಡಿಜಿಟಲ್ ಡೆಸ್ಕ್:
ನೀವು ಬೇಸಿಗೆಯಲ್ಲಿ ಬೆವರುವಿಕೆಯ ಸಮಸ್ಯೆಯನ್ನು ಎದುರಿಸುತ್ತಿದ್ದೀರಾ? ಕೆಲವರಿಗೆ ಇದು ಅಷ್ಟು ದೊಡ್ಡ ವಿಷಯ ಎಂದು ಅನಿಸದೇ ಇರಬಹುದು. ಆದರೆ ಇದು ನಿಜವಾಗಿಯೂ ಮುಖ್ಯ ವಿಚಾರವಾಗಿದೆ. ನೀವು ಹೆಚ್ಚು ಪರಿಮಳ ಭರಿತ ದ್ರವ್ಯವನ್ನು ಬಳಸಿದರೆ, ನೀವು ಸ್ನಾನ ಮಾಡಲ್ವಾ ಎಂದು ಅಪಹಾಸ್ಯ ಮಾಡುತ್ತಾರೆ. ಆದರೆ ಬೇಸಿಗೆಯಲ್ಲಿ ಬೆವರಿನ ದುರ್ಗಂಧ ಸಹಿಸಲು ಸಾಧ್ಯವಿಲ್ಲ. ಹಾಗಾದ್ರೆ ಇದಕ್ಕೆ ಪರಿಹಾರ ಏನು? ತಿಳಿಯೋಣ ಬನ್ನಿ..
ಬೇಸಿಗೆಯಲ್ಲಿ ವೈಯಕ್ತಿಕ ನೈರ್ಮಲ್ಯಕ್ಕೆ ಗಮನ ಕೊಡುವುದು ಬಹಳ ಮುಖ್ಯ. ತಂಪಾದ ಅಥವಾ ಬೆಚ್ಚಗಿನ ನೀರಿನಿಂದ ಸ್ನಾನ ಮಾಡುವುದು ದಿನಕ್ಕೆ ಒಮ್ಮೆಯಾದರೂ ಅಗತ್ಯವಾಗಿರುತ್ತದೆ. ಕುತ್ತಿಗೆ ಕೆಳಗೆ, ಕಂಕುಳು ಮುಂತಾದ ದೇಹದ ಭಾಗದಲ್ಲಿ ಬಹಳಷ್ಟು ಬೆವರು ಉತ್ಪಾದಿಸುವ ಭಾಗಗಳನ್ನು ಸ್ವಚ್ಛಗೊಳಿಸಲು ವಿಶೇಷ ಗಮನ ಕೊಡಿ.
ಈಗಾಗಲೇ ಅನೇಕರು ಇದನ್ನು ಬಳಸುತ್ತಾರೆ. ಇದು ಬೆವರಿನ ವಾಸನೆಯನ್ನು ತಡೆಯುತ್ತದೆ. ನೀವು Antiperspirant ಸಹ ಬಳಸಬಹುದು.
ಕೆಲವು ಆಹಾರಗಳು ನಮ್ಮ ಹಸಿವನ್ನು ಬದಲಾಯಿಸಬಹುದು. ಅತಿಯಾದ ಸಿಹಿ, ಕೊಬ್ಬಿನ ಮತ್ತು ಮಸಾಲೆಯುಕ್ತ ಆಹಾರಗಳು ಬೆವರು ಉತ್ಪಾದನೆಯನ್ನು ಹೆಚ್ಚಿಸುತ್ತವೆ ಮತ್ತು ಬೆವರಿಗೆ ಅಸಹನೀಯ ವಾಸನೆಯನ್ನು ನೀಡುತ್ತದೆ.
ಸಮಾನ ಪ್ರಮಾಣದ ಆಪಲ್ ಸೈಡರ್ ವಿನೆಗರ್ ಅನ್ನು ನೀರಿನೊಂದಿಗೆ ಬೆರೆಸಿ ಸ್ನಾನ ಮಾಡುವದರಿಂದ ಚರ್ಮದ pH ಅನ್ನು ಸಮತೋಲನಗೊಳಿಸುತ್ತದೆ ಮತ್ತು ಬೆವರು ಬ್ಯಾಕ್ಟೀರಿಯಾದ ಬೆಳವಣಿಗೆಯನ್ನು ತಡೆಯುತ್ತದೆ.