ಸ್ಮೋಕ್‌ಬಾಂಬ್ ದಾಳಿ: ಐವರು ಆರೋಪಿಗಳಿಗೆ ಇಂದು ಮಂಪರು ಪರೀಕ್ಷೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸಂಸತ್ ಒಳಗಡೆ ಸ್ಮೋಕ್ ಬಾಂಬ್ ಸಿಡಿಸಿದ ಆರು ಆರೋಪಿಗಳ ಪೈಕಿ ಇಂದು ಐವರಿಗೆ ಮಂಪರು ಪರೀಕ್ಷೆ ನಡೆಸಲಾಗುತ್ತದೆ.

ಮಂಪರು ಪರೀಕ್ಷೆ ಜೊತೆಗೆ ಸುಳ್ಳುಪತ್ತೆ ಪರೀಕ್ಷೆ ಕೂಡ ನಡೆಸಲಾಗುತ್ತಿದ್ದು, ಆರೋಪಿಗಳಲ್ಲಿ ಒಬ್ಬರಾದ ನೀಲಂ ಮಂಪರು ಪರೀಕ್ಷೆಗೆ ಒಪ್ಪಿಗೆ ನೀಡಿಲ್ಲ. ಈ ಹಿನ್ನೆಲೆಯಲ್ಲಿ ಐವರಿಗೆ ಮಾತ್ರ ಪರೀಕ್ಷೆ ನಡೆಸಲಾಗುತ್ತಿದೆ.

ಮನೋರಂಜನ್, ಸಾಗರ್ ಶರ್ಮಾ, ಅಮುಲ್ ಶಿಂಧೆ, ಲಲಿತ್ ಝಾ ಹಾಗೂ ಮಹೇಶ್ ಕುಮಾವರ್‌ಗೆ ಗುಜರಾತ್‌ನ ಗಾಂಧಿನಗರದ ಪ್ರಯೋಗಾಲಯದಲ್ಲಿ ಪರೀಕ್ಷೆ ಮಾಡಲಾಗುತ್ತಿದೆ.

ಸಾಗರ್ ಶರ್ಮಾ ಮತ್ತು ಮನೋರಂಜನ್ ಸದನದ ಒಳಗೆ ಹಳದಿ ಸ್ಟ್ರೋಕ್ ಬಾಂಬ್ ಸ್ಫೋಟಿಸಿದ್ದಾರೆ. ಇನ್ನು ನೀಲಂ ಹಾಗೂ ಅಮೂಲ್ ಶಿಂಧೆ ಕೆಂಪು ಹಾಗೂ ಹಳದಿ ಸ್ಮೋಕ್ ಬಾಂಬ್ ಸಿಡಿಸಿದ್ದರು. ನಂತರ ಎಲ್ಲರೂ ಪರಾರಿಯಾಗಿದ್ದರು. ನಿರುದ್ಯೋಗ, ಸರ್ವಾಧಿಕಾರದಿಂದ ಬೇಸತ್ತು ಈ ರೀತಿ ಮಾಡಿರುವುದಾಗಿ ಆರೋಪಿಗಳು ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!