ಹೊಸದಿಗಂತ ವರದಿ, ಮೈಸೂರು:
ಮೈಸೂರು ದಸರಾ ವಸ್ತು ಪ್ರದರ್ಶನ ಆವರಣದಲ್ಲಿ ಇದ್ದಕ್ಕಿದ್ದಂತೆ ಹೊಗೆ ಕಾಣಿಕೊಂಡು ಕೆಲಕಾಲ ಆತಂಕವನ್ನುoಟು ಮಾಡಿದ ಘಟನೆ ಭಾನುವಾರ ನಡೆಯಿತು.
ದಸರಾ ವಸ್ತು ಪ್ರದರ್ಶನವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಉದ್ಘಾಟಿಸುವುದಕ್ಕೆ ಬರುವ ಮುನ್ನಾ ಶಾರ್ಟ್ ಸರ್ಕ್ಯೂಟ್ ನಿಂದ, ಫ್ಯೂಸ್ ಬಾಕ್ಸ್ನಲ್ಲಿ ಹೊಗೆ ಕಾಣಿಸಿಕೊಂಡಿದ್ದು, ಓವರ್‌ಲೋಡ್‌ನಿಂದ ಶಾರ್ಟ್ ಸರ್ಕ್ಯೂಟ್ ಆಗಿರುವ ಅನುಮಾನ ವ್ಯಕ್ತವಾಗಿದ್ದು, ಎಚ್ಚೆತ್ತ ಸಿಬ್ಬಂದಿಗಳು ಕೂಡಲೇ ವಸ್ತು ಪ್ರದರ್ಶನ ಆವರಣದಲ್ಲಿ ಫ್ಯೂಸ್ ಸರಿಪಡಿಸಿ, ಸಂಭವಿಸಲಿದ್ದ ಅನಾಹುತವನ್ನು ತಪ್ಪಿಸಿದರು.