ಹೊಸದಿಗಂತ ವರದಿ,ಕಲಬುರಗಿ :
ನಗರದ ಖಮಿತಕರ್ ಭವನದಲ್ಲಿ ಅ.೧೬ರಂದು ಸಂಜೆ ೬-೩೦ಕ್ಕೆ ವಿಕ್ರಮದ ಬಳಗದ ವತಿಯಿಂದ ಕಲ್ಯಾಣ ಕರ್ನಾಟಕ ಭಾಗದ ಸಂಪೂರ್ಣ ಪಕ್ಷಿನೋಟ ಬೀರುವಂತಹ ಕಾಫಿ ಟೇಬಲ್ ಪುಸ್ತಕದ ಲೋಕಾರ್ಪಣೆ ಕಾರ್ಯಕ್ರಮ ನೆರವೇರಲಿದೆ.
ಪುಸ್ತಕದ ಲೋಕಾರ್ಪಣೆ ಸಮಾರಂಭವನ್ನು ವಿಶ್ವ ಹಿಂದೂ ಪರಿಷತ್,ನ ಕೇಂದ್ರೀಯ ಸಹ ಕಾರ್ಯದರ್ಶಿಯಾದ ಗೋಪಾಲ್ ನಾಗರಕಟ್ಟೆ ಜೀ ಮಾಡಲಿದ್ದು, ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಚೆರ್ ಪರ್ಸನ್ ಪೂಜ್ಯ ಮಾತೋಶ್ರೀ ಡಾ.ದಾಕ್ಷಾಯಿಣಿ ಎಸ್ ಅಪ್ಪಾ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಾಷ್ಟ್ರೀಯ ಸ್ವಯಂಸೇವಕ ಸಂಘದ ಕರ್ನಾಟಕ ಉತ್ತರ ಪ್ರಾಂತದ ಪ್ರಾಂತ ಸಂಚಾಲಕರಾದ ಖಗೇಶನ್ ಪಟ್ಟಣಶೆಟ್ಟಿ ವಹಿಸಲಿದ್ದಾರೆ ಎಂದು ವಿಕ್ರಮ ಬಳಗವು ತಿಳಿಸಿದೆ.