ಹೊಸದಿಗಂತ ಡಿಜಿಟಲ್ ಡೆಸ್ಕ್:
ಒಡಿಶಾದಲ್ಲಿ ಸಂಭವಿಸಿದ ಭೀಕರ ರೈಲು ಅಪಘಾತ ಇನ್ನು ಕಣ್ಣಿಗೆ ಕಟ್ಟದಂತಿದೆ. ಇಂತಹ ಹೊತ್ತಿನಲ್ಲಿ..ಮತ್ತೊಂದು ರೈಲು ಅಪಘಾತ ಸ್ವಲ್ಪದರಲ್ಲಿ ತಪ್ಪಿದೆ. ಮಚಲಿಪಟ್ಟಣಂ-ತಿರುಪತಿ ಎಕ್ಸ್‌ಪ್ರೆಸ್ ಭಾನುವಾರ ಮಧ್ಯರಾತ್ರಿ ಭಾರಿ ಅಪಘಾತಕ್ಕೀಡಾಗುವ ಸಂಭವವಿತ್ತು. ಮಚಲಿಪಟ್ಟಣದಿಂದ ತಿರುಪತಿಗೆ ಪ್ರಯಾಣಿಸುತ್ತಿದ್ದಾಗ ಟಂಗಟೂರು ಬಳಿ ಬೋಗಿಗಳಿಗೆ ಹೊಗೆ ವ್ಯಾಪಿಸಿತು. ಗಾಬರಿಗೊಂಡ ಪ್ರಯಾಣಿಕರು ತಕ್ಷಣ ಚೈನ್ ಎಳೆದು ರೈಲನ್ನು ನಿಲ್ಲಿಸಿದರು.
ಬ್ರೇಕ್‌ನಲ್ಲಿ ಲೂಬ್ರಿಕಂಟ್ ಖಾಲಿಯಾದ ಕಾರಣ, ಚಕ್ರಗಳ ಘರ್ಷಣೆಯಿಂದ ಹೊಗೆ ಹರಡಿದೆ ಎಂದು ತಿಳಿದಿದೆ. ಈ ಹಿನ್ನೆಲೆಯಲ್ಲಿ ಹೊಗೆ ಕಂಡು ಹೆದರಿದ ಪ್ರಯಾಣಿಕರು ರೈಲಿನಿಂದ ಕೆಳಗಿಳಿದಿದ್ದಾರೆ.
ಇದನ್ನು ಗಮನಿಸಿದ ರೈಲ್ವೆ ಸಿಬ್ಬಂದಿ ಕೂಡಲೇ ಪರಿಸ್ಥಿತಿಯನ್ನು ಹತೋಟಿಗೆ ತಂದರು. ರೈಲಿಗೆ ಏನೂ ಆಗಿಲ್ಲ ಎಂದು ತಿಳಿಯುತ್ತಿದ್ದಂತೆ ಪ್ರಯಾಣಿಕರು ನಿಟ್ಟುಸಿರು ಬಿಟ್ಟರು. 20 ನಿಮಿಷಗಳ ನಂತರ ರೈಲು ಮತ್ತೆ ಹೊರಟಿತು.