Saturday, October 1, 2022

Latest Posts

ಐಸಿಸಿ ಟಿ 20 ರ‍್ಯಾಂಕಿಂಗ್‌ನಲ್ಲಿ 2ನೇ ಸ್ಥಾನಕ್ಕೆ ಜಿಗಿದ ಸ್ಮೃತಿ ಮಂಧಾನ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಸ್ಟಾರ್ ಇಂಡಿಯಾದ ಆರಂಭಿಕ ಆಟಗಾರ್ತಿ ಸ್ಮೃತಿ ಮಂಧಾನ ಐಸಿಸಿ ಟಿ 20 ಶ್ರೇಯಾಂಕದಲ್ಲಿ 2 ನೇ ಸ್ಥಾನಕ್ಕೆ ಜಿಗಿಯುವ ಮೂಲಕ ಟಿ20 ವೃತ್ತಿಜೀವನದಲ್ಲಿ ಅತ್ಯುತ್ತಮ ಸಾಧನೆ ಮಾಡಿದ್ದಾರೆ.
ಪ್ರಸ್ತುತ ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ತೋರುತ್ತಿರುವ ಮಂಧಾನ, ಏಕದಿನ ರ್ಯಾಂಕಿಂಗ್‌ ನಲ್ಲೂ ಏಳನೇ ಸ್ಥಾನಕ್ಕೆ ಏರಿದ್ದಾರೆ.
ಇಂಗ್ಲೆಂಡ್ ವಿರುದ್ಧದ ಮೂರು ಪಂದ್ಯಗಳ ಟಿ 20 ಸರಣಿಯಲ್ಲಿ ಎಡಗೈ ಬ್ಯಾಟರ್ ಸ್ಮೃತಿ ಒಟ್ಟು 111 ರನ್ ಕಲೆಹಾಕಿದ್ದರು. ಈ ಪ್ರದರ್ಶನವು ಅವರಿಗೆ ಎರಡು ಸ್ಥಾನಗಳನ್ನು ಜಿಗಿಯಲು ಸಹಾಯ ಮಾಡಿತು. ಏಕದಿನದಲ್ಲಿ ಮಾಜಿ ಅಗ್ರ ಶ್ರೇಯಾಂಕದ ಬ್ಯಾಟರ್ ಆಗಿರುವ ಮಂಧಾನ, ಇಂಗ್ಲೆಂಡ್ ವಿರುದ್ಧದ ಮೊದಲ ODI ನಲ್ಲಿ 91 ರನ್ ಗಳಿಸಿದ ನಂತರ ಮೂರು ಸ್ಥಾನಗಳನ್ನು ಜಿಗಿದು ಏಳನೇ ಸ್ಥಾನಕ್ಕೆ ತಲುಪಿದ್ದಾರೆ.
ಇತರ ಭಾರತೀಯರ ಪೈಕಿ, ನಾಯಕಿ ಹರ್ಮನ್‌ಪ್ರೀತ್ ಕೌರ್ ಏಕದಿನದಲ್ಲಿ ನಾಲ್ಕು ಸ್ಥಾನಗಳ ಏರಿಕೆ ಕಂಡು ಒಂಬತ್ತನೇ ಸ್ಥಾನಕ್ಕೆ ಏರಿದ್ದಾರೆ, ಆಲ್‌ರೌಂಡರ್ ದೀಪ್ತಿ ಶರ್ಮಾ ಒಂದು ಸ್ಥಾನ ಏರಿ 32 ನೇ ಸ್ಥಾನವನ್ನು ತಲುಪಿದ್ದಾರೆ ಮತ್ತು ವಿಕೆಟ್‌ಕೀಪರ್ ಯಾಸ್ತಿಕಾ ಭಾಟಿಯಾ 8 ಸ್ಥಾನ ಜಿಗಿದು 37 ನೇ ಸ್ಥಾನಕ್ಕೆ ತಲುಪಿದ್ದಾರೆ.
ಬೌಲರ್‌ಗಳ ಪಟ್ಟಿಯಲ್ಲಿ ದೀಪ್ತಿ ಶರ್ಮಾ ಆರು ಸ್ಥಾನ ಮೇಲೇರಿ 12ನೇ ಸ್ಥಾನಕ್ಕೆ ತಲುಪಿದ್ದಾರೆ.
T20I ಶ್ರೇಯಾಂಕದಲ್ಲಿ ಹರ್ಮನ್‌ ಪ್ರೀತ್ ಕೌರ್ (14 ನೇ ಸ್ಥಾನ), ಬೌಲರ್ ರೇಣುಕಾ ಸಿಂಗ್ ( ಬೌಲಿಂಗ್‌ ನಲ್ಲಿ 10 ನೇ ಸ್ಥಾನ) ಮತ್ತು ಸ್ಪಿನ್ನರ್ ರಾಧಾ ಯಾದವ್ (14 ನೇ ಸ್ಥಾನ) ಗಮನಾರ್ಹ ಏರಿಕೆ ಗಳಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!