January16, 2026
Friday, January 16, 2026
spot_img

ಸ್ಮೃತಿ–ಪಲಾಶ್ ವಿವಾಹ ವದಂತಿ: ಸೋಶಿಯಲ್ ಮೀಡಿಯಾದಲ್ಲಿ ಮತ್ತೆ ಹೊಸ ಚರ್ಚೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಾಲಿವುಡ್ ಸಂಗೀತಗಾರ ಪಲಾಶ್ ಮುಚ್ಚಲ್ ಮತ್ತು ಭಾರತದ ಕ್ರಿಕೆಟ್ ತಾರೆ ಸ್ಮೃತಿ ಮಂಧಾನ ಅವರ ವಿವಾಹದ ಬಗ್ಗೆ ಕಳೆದ ಕೆಲ ದಿನಗಳಿಂದ ಹರಡಿರುವ ಸುದ್ದಿಗಳು ಮತ್ತೆ ಸಾಮಾಜಿಕ ಜಾಲತಾಣಗಳಲ್ಲಿ ಗದ್ದಲ ಸೃಷ್ಟಿಸಿವೆ.

ವಿವಾದಗಳ ನಡುವೆ ಇಬ್ಬರೂ ತಮ್ಮ Instagram ಬಯೋದಲ್ಲಿ ‘ಎವಿಲ್ ಐ’ (Evil Eye ) ಎಮೋಜಿ ಬಳಸಿರುವುದು ನಾನಾ ರೀತಿಯ ಊಹಾಪೋಹಗಳಿಗೆ ಕಾರಣವಾಗಿದೆ. ಇದರಿಂದ ಅವರ ಸಂಬಂಧದ ಭವಿಷ್ಯದ ಬಗ್ಗೆ ಅಭಿಮಾನಿಗಳು ಕುತೂಹಲದಿಂದ ಪ್ರಶ್ನೆಗಳನ್ನು ಎತ್ತುತ್ತಿದ್ದಾರೆ.

ಮೂಲ ವರದಿ ಪ್ರಕಾರ, ನವೆಂಬರ್ 23, 2025ಕ್ಕೆ ಇವರ ವಿವಾಹ ನಿಗದಿಯಾಗಿತ್ತು. ಆದರೆ ಅದೇ ದಿನ ಸ್ಮೃತಿಯ ತಂದೆಗೆ ಅಸ್ವಸ್ಥತೆ ಕಾಣಿಸಿಕೊಂಡಿದ್ದರಿಂದ ತೀವ್ರವಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂಬ ಮಾಹಿತಿ ಹೊರಬಂದಿತ್ತು. ಈ ಕಾರಣದಿಂದ ಮದುವೆ ಮುಂದೂಡಲಾಗಿದೆ ಎಂದು ಹೇಳಲಾಗಿತ್ತು. ಆದರೆ ನಂತರ ಸಾಮಾಜಿಕ ಜಾಲತಾಣಗಳಲ್ಲಿ ಬೇರೆ ರೀತಿಯ ಆರೋಪಗಳು ಹರಿದಾಡತೊಡಗಿದವು. ಕೆಲವು ಬಳಕೆದಾರರು ಪಲಾಶ್ ಅವರು ಮದುವೆಗೆ ಮುನ್ನ ನೃತ್ಯ ಸಂಯೋಜಕಿಯೊಂದಿಗೆ ಚೀಟ್ ಮಾಡಿದ್ದರು ಎನ್ನಲಾಗುವ ಪೋಸ್ಟ್‌ಗಳನ್ನು ಹಂಚಿಕೊಂಡಿದ್ದು, ಇದರಿಂದ ವಿವಾದ ಇನ್ನಷ್ಟು ಉಲ್ಬಣವಾಯಿತು.

ಈ ಎಲ್ಲ ಗದ್ದಲದ ನಡುವೆಯೂ ಪಲಾಶ್ ಹಾಗೂ ಸ್ಮೃತಿ ಇಬ್ಬರೂ ಇನ್ನೂ ಅಧಿಕೃತ ಹೇಳಿಕೆ ನೀಡಿಲ್ಲ. ಹೀಗಾಗಿ ಅವರ ಮದುವೆಯ ಭವಿಷ್ಯ, ಮುಂದಿನ ನಿರ್ಧಾರಗಳ ಬಗ್ಗೆ ಸ್ಪಷ್ಟತೆ ಇನ್ನೂ ಸಿಕ್ಕಿಲ್ಲ ಎನ್ನುವುದೇ ಸತ್ಯ.

Must Read

error: Content is protected !!