ಮೊಸರು
ಪನೀರ್
ಕಡಲೆ ಹಿಟ್ಟು
ಹಸಿಮೆಣಸಿನಕಾಯಿ ಹಾಗೂ ಶುಂಠಿ
ಕೊತ್ತಂಬರಿ ಸೊಪ್ಪು
ಗರಂ ಮಸಾಲ, ಜೀರಿಗೆ ಪುಡಿ, ಚಾಟ್ ಮಸಾಲ
ಉಪ್ಪು
ಬ್ರೆಡ್ ಕ್ರಂಬ್ಸ್
ಎಣ್ಣೆ
ಮೊದಲಿಗೆ ಒಂದು ಬೌಲ್‌ನಲ್ಲಿ ಗಟ್ಟಿ ಮೊಸರು, ತುರಿದ ಪನೀರ್, ಕಡಲೆ ಹಿಟ್ಟು, ಹಸಿಮೆಣಸಿನಕಾಯಿ, ಶುಂಠಿ ಮತ್ತು ಕೊತ್ತಂಬರಿ ಸೊಪ್ಪು ಹಾಕಿ. ನಂತರ ಗರಂ ಮಸಾಲ, ಜೀರಿಗೆ ಪುಡಿ, ಚಾಟ್ ಮಸಾಲ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಎಲ್ಲವನ್ನೂ ಚೆನ್ನಾಗಿ ಮಿಕ್ಸ್ ಮಾಡಿ ಹಿಟ್ಟಿನಂತೆ ನಾದಿಕೊಳ್ಳಿ. ಈ ಮಿಶ್ರಣದಿಂದ ಸಣ್ಣ ಸಣ್ಣ ಉಂಡೆಗಳನ್ನು ಮಾಡಿ, ವಡೆ ಆಕಾರದಲ್ಲಿ ತಟ್ಟಿ. ತಯಾರಿಸಿದ ಕಬಾಬ್‌ಗಳನ್ನು ಬ್ರೆಡ್ ಕ್ರಂಬ್ಸ್‌ನಲ್ಲಿ ಚೆನ್ನಾಗಿ ಹೊರಳಾಡಿಸಿ, ಮೇಲ್ಭಾಗ ಕ್ರಿಸ್ಪಿ ಆಗಲು ಕೋಟ್ ಮಾಡಿ. ಪ್ಯಾನ್ ಮೇಲೆ ಸ್ವಲ್ಪ ಎಣ್ಣೆ ಹಾಕಿ, ಕಬಾಬ್‌ಗಳನ್ನು ಎರಡೂ ಕಡೆ ಗೋಲ್ಡನ್ ಬ್ರೌನ್ ಬರುವವರೆಗೆ ಸಣ್ಣ ಉರಿಯಲ್ಲಿ ಫ್ರೈ ಮಾಡಿದರೆ ಬಿಸಿ ಬಿಸಿ ದಹಿ ಕಬಾಬ್ ರೆಡಿ.
ಇದನ್ನು ಪುದೀನಾ ಚಟ್ನಿ ಅಥವಾ ಟೊಮೆಟೊ ಸಾಸ್ ಜೊತೆ ಸವಿಯಲು ಕೊಡಿ, ಮನೆಯವರೆಲ್ಲಾ ಸೂಪರ್ ಅಂತಾರೆ!



