ಬಾಳೆಹಣ್ಣು
ಗೋಧಿ ಹಿಟ್ಟು
ಹಾಲು
ಸಕ್ಕರೆ
ಬೇಕಿಂಗ್ ಪೌಡರ್
ಬೆಣ್ಣೆ
ಉಪ್ಪು ಮತ್ತು ಏಲಕ್ಕಿ ಪುಡಿ
ಒಂದು ಪಾತ್ರೆಯಲ್ಲಿ ಬಾಳೆಹಣ್ಣನ್ನು ಚೆನ್ನಾಗಿ ಸ್ಮಾಶ್ ಮಾಡಿ. ಅದಕ್ಕೆ ಗೋಧಿ ಹಿಟ್ಟು, ಸಕ್ಕರೆ, ಬೇಕಿಂಗ್ ಪೌಡರ್, ಉಪ್ಪು ಹಾಗೂ ಏಲಕ್ಕಿ ಪುಡಿ ಸೇರಿಸಿ. ಸ್ವಲ್ಪ ಸ್ವಲ್ಪವೇ ಹಾಲು ಹಾಕುತ್ತಾ, ಗಂಟುಗಳಿಲ್ಲದಂತೆ ದೋಸೆ ಹಿಟ್ಟಿಗಿಂತ ಕೊಂಚ ದಪ್ಪಗಿರುವ ಮಿಶ್ರಣ ತಯಾರಿಸಿ. ಕಾವಲಿಯನ್ನು ಕಾಯಿಸಿ, ಸ್ವಲ್ಪ ಬೆಣ್ಣೆ ಸವರಿ. ಸೌಟಿನಿಂದ ಹಿಟ್ಟನ್ನು ಸುರಿಯಿರಿ. ಸಣ್ಣ ಉರಿಯಲ್ಲಿ ಮೇಲ್ಭಾಗದಲ್ಲಿ ಗುಳ್ಳೆಗಳು ಬರುವವರೆಗೆ ಬೇಯಿಸಿ, ನಂತರ ಮಗುಚಿ ಹಾಕಿ ಎರಡೂ ಬದಿ ಬೇಯಿಸಿದರೆ ಬಿಸಿಬಿಸಿ ಪ್ಯಾನ್ಕೇಕ್ ಸಿದ್ಧ!



