October 12, 2026
Monday, October 12, 2026
spot_img

SNACKS | ಕ್ರಂಚಿ-ಮಂಚಿ ಬೀಟ್‌ರೂಟ್ ಚಿಪ್ಸ್.. ಒಮ್ಮೆ ತಿಂದರೆ ಮತ್ತೆ ಮತ್ತೆ ಬೇಕು ಅಂತಿರಾ!

ಬೇಕಾಗುವ ಸಾಮಗ್ರಿಗಳು:

ಬೀಟ್‌ರೂಟ್

ಎಣ್ಣೆ

ಕಾಳುಮೆಣಸಿನ ಪುಡಿ

ಚಾಟ್ ಮಸಾಲ

ಉಪ್ಪು

ಮಾಡುವ ವಿಧಾನ

ಬೀಟ್ರೂಟ್ ಸಿಪ್ಪೆ ತೆಗೆದು, ಚಾಕುವಿನಿಂದ ಬಹಳ ತೆಳುವಾಗಿ ಸ್ಲೈಸ್ ಮಾಡಿಕೊಳ್ಳಿ. ಕತ್ತರಿಸಿದ ಬೀಟ್ರೂಟ್ ಚೂರುಗಳನ್ನು ಒಂದು ಕಾಟನ್ ಬಟ್ಟೆ ಅಥವಾ ಟಿಶ್ಯೂ ಪೇಪರ್ ಮೇಲಿಟ್ಟು ಒತ್ತಿ, ಅದರ ನೀರಿನ ಅಂಶವನ್ನು ಪೂರ್ತಿಯಾಗಿ ಒರೆಸಿ. ಈಗ ಒಂದು ಪಾತ್ರೆಯಲ್ಲಿ ಬೀಟ್ರೂಟ್ ಸ್ಲೈಸ್, ಎಣ್ಣೆ, ಉಪ್ಪು, ಕಾಳುಮೆಣಸಿನ ಪುಡಿ ಹಾಗೂ ಚಾಟ್ ಮಸಾಲ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಬಾಣಲೆಯಲ್ಲಿ ಎಣ್ಣೆ ಕಾಯಿಸಿ, ಸಣ್ಣ ಉರಿಯಲ್ಲಿ ಬೀಟ್ರೂಟ್ ಸ್ಲೈಸ್‌ಗಳನ್ನು ಹಾಕಿ, ಕರಿದು ತೆಗೆಯಿರಿ. ತಣ್ಣಗಾದ ಮೇಲೆ ಗಾಳಿಯಾಡದ ಡಬ್ಬಿಯಲ್ಲಿಟ್ಟರೆ ಹಲವು ದಿನಗಳ ಕಾಲ ಇರುತ್ತವೆ.

ಕರಿದ ತಕ್ಷಣ ಚಿಪ್ಸ್ ಮೇಲೆ ಸ್ವಲ್ಪ ಚಾಟ್ ಮಸಾಲಾ ಉದುರಿಸಿದರೆ ಸೂಪರ್ ಟೇಸ್ಟಿ ಹಾಗೂ ಹೆಲ್ದಿ ಬೀಟ್‌ರೂಟ್ ಚಿಪ್ಸ್ ರೆಡಿ!

Must Read