September 22, 2026
Tuesday, September 22, 2026
spot_img

SNACKS | ಹೀರೆಕಾಯಿ ಪಲ್ಯ ಇಷ್ಟವಾಗುವುದಿಲ್ವಾ? ಹಾಗಾದ್ರೆ ಈ ರೀತಿ ಬಜ್ಜಿ ಮಾಡಿ

ಸಾಮಾನ್ಯವಾಗಿ ಕೆಲವರು ಹೀರೆಕಾಯಿ ಪಲ್ಯ ಎಂದರೆ ಮೂಗು ಮುರಿಯುತ್ತಾರೆ. ಆದರೆ ಅದೇ ಹೀರೆಕಾಯಿಯಿಂದ ಸಂಜೆ ಸ್ನಾಕ್ಸ್‌ಗೆ ಗರಿಗರಿಯಾದ ಬಜ್ಜಿ ಮಾಡಿಕೊಟ್ಟರೆ ತಟ್ಟೆ ಖಾಲಿಯಾಗುವುದರಲ್ಲಿ ಸಂಶಯವೇ ಇಲ್ಲ. ಹಾಗಾದ್ರೆ ಯಾಕೆ ತಡ ಇಂದೇ ಈ ಬಜ್ಜಿ ಮಾಡಿ ಸವಿಯಿರಿ.

ಬೇಕಾಗುವ ಸಾಮಗ್ರಿಗಳು

ಹೀರೆಕಾಯಿ

ಕಡಲೆಹಿಟ್ಟು

ಅಕ್ಕಿಹಿಟ್ಟು

ಅಚ್ಚ ಅಚ್ಚಕಾರದ ಪುಡಿ

ಅರಿಶಿನ ಪುಡಿ

ಅಡುಗೆ ಸೋಡಾ

ಉಪ್ಪು

ನೀರು

ಎಣ್ಣೆ

ಮಾಡುವ ವಿಧಾನ:

ಮೊದಲು ಹೀರೆಕಾಯಿಯ ಮೇಲಿರುವ ನಾರನ್ನು ಸ್ವಲ್ಪ ತೆಗೆದು, ಸ್ಲೈಸ್‌ಗಳನ್ನು ಮಾಡಿಟ್ಟುಕೊಳ್ಳಬೇಕು. ನಂತರ ಒಂದು ಪಾತ್ರೆಯಲ್ಲಿ ಕಡಲೆಹಿಟ್ಟು, ಅಕ್ಕಿಹಿಟ್ಟು, ಕಾರದ ಪುಡಿ, ಅರಿಶಿನ, ಅಡುಗೆ ಸೋಡಾ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಸ್ವಲ್ಪ ಸ್ವಲ್ಪವೇ ನೀರು ಸೇರಿಸುತ್ತಾ ಸ್ವಲ್ಪ ಗಟ್ಟಿಯಾಗಿ ಕಲಸಿಕೊಳ್ಳಬೇಕು. ಬಳಿಕ ಬಾಣಲೆಯಲ್ಲಿ ಕರಿಯಲು ಎಣ್ಣೆ ಹಾಕಿ ಅದು ಚೆನ್ನಾಗಿ ಕಾದ ನಂತರ ಹೆಚ್ಚಿಟ್ಟುಕೊಂಡ ಹೀರೆಕಾಯಿ ಬಿಲ್ಲೆಗಳನ್ನು ಸಿದ್ಧಪಡಿಸಿದ ಹಿಟ್ಟಿನಲ್ಲಿ ಅದ್ದಿ, ಕಾದ ಎಣ್ಣೆಗೆ ಒಂದೊಂದಾಗಿ ಬಿಡಬೇಕು. ಬಜ್ಜಿಯ ಎರಡು ಕಡೆ ಹೊಂಬಣ್ಣಕ್ಕೆ ಬರುವವರೆಗೆ ಕರಿದರೆ, ಹೀರೆಕಾಯಿ ಬಜ್ಜಿ ಸಿದ್ದ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !