September 27, 2026
Sunday, September 27, 2026
spot_img

SNACKS | ಹೊರಗಡೆ ತಿಂದಿದ್ದು ಸಾಕು, ಮನೆಯಲ್ಲೇ ಮಾಡಿ ಸೂಪರ್ ಟೇಸ್ಟಿ ಬೋಟಿ ಮಸಾಲಾ ಚಾಟ್!

ಚಾಟ್ ಸೆಂಟರ್‌ಗಳಲ್ಲಿ ಸಿಗೋ ‘ಬೋಟಿ ಮಸಾಲಾ’ ತಿಂದ್ರೆ ಆ ಖುಷಿನೇ ಬೇರೆ. ಆದರೆ ಪ್ರತಿ ಬಾರಿಯೂ ಹೊರಗಡೆ ಹೋಗಿ ತಿನ್ನೋಕೆ ಆಗಲ್ಲ ಅಲ್ವಾ? ಅದಕ್ಕೇ ಮನೆಯಲ್ಲೇ ಮಾಡಿಕೊಳ್ಳಬಹುದಾದ ಸ್ಟ್ರೀಟ್ ಸ್ಟೈಲ್ ಬೋಟಿ ಮಸಾಲಾ ಚಾಟ್ ರೆಸಿಪಿ ಇಲ್ಲಿದೆ:

ಬೋಟಿ

ಎಣ್ಣೆ

ಈರುಳ್ಳಿ

ಟೊಮೆಟೊ

ಹಸಿಮೆಣಸಿನಕಾಯಿ

ಸೌತೆಕಾಯಿ

ಖಾರದ ಪುಡಿ

ಚಾಟ್ ಮಸಾಲಾ

ನಿಂಬೆಹಣ್ಣಿನ ರಸ

ಸೇವ್

ಕೊತ್ತಂಬರಿ ಸೊಪ್ಪು

ಉಪ್ಪು

ಮೊದಲು ಬಾಣಲೆಯಲ್ಲಿ ಎಣ್ಣೆ ಕಾಯೋಕೆ ಇಡಿ. ಎಣ್ಣೆ ಚೆನ್ನಾಗಿ ಬಿಸಿಯಾದ ಮೇಲೆ ಬೋಟಿಗಳನ್ನು ಹಾಕಿ ಗರಿಗರಿಯಾಗಿ ಕರಿದು, ಒಂದು ದೊಡ್ಡ ಬೌಲ್‌ಗೆ ಹಾಕಿ ತೆಗೆದಿಟ್ಟುಕೊಳ್ಳಿ. ಕರೆದ ಬೋಟಿ ಸ್ವಲ್ಪ ತಣ್ಣಗಾಗಲಿ. ಬಿಸಿ ಇದ್ದಾಗ ಮಸಾಲಾ ಹಾಕಿದ್ರೆ ಅದು ಬೇಗ ಮೆತ್ತಗಾಗಿಬಿಡುತ್ತೆ.

ತಣ್ಣಗಾದ ಬೋಟಿಗೆ ಹೆಚ್ಚಿದ ಈರುಳ್ಳಿ, ಟೊಮೆಟೊ, ಸೌತೆಕಾಯಿ ಮತ್ತು ಹಸಿಮೆಣಸಿನಕಾಯಿ ಹಾಕಿ ಮಿಕ್ಸ್ ಮಾಡಿ. ಈಗ ಖಾರದ ಪುಡಿ, ಚಾಟ್ ಮಸಾಲಾ, ಸೇವ್ ಮತ್ತು ಒಂದು ಚಿಟಿಕೆ ಉಪ್ಪು ಉದುರಿಸಿ. ಕೊನೆಯಲ್ಲಿ ನಿಂಬೆಹಣ್ಣಿನ ರಸ ಹಿಂಡಿ, ಕೊತ್ತಂಬರಿ ಸೊಪ್ಪನ್ನು ಮೇಲಿಂದ ಉದುರಿಸಿ ಎಲ್ಲವನ್ನೂ ಒಮ್ಮೆ ಚೆನ್ನಾಗಿ ಮಿಕ್ಸ್ ಮಾಡಿ. ಈಗ ಖಾರ ಖಾರವಾದ ಬೋಟಿ ಮಸಾಲಾ ಚಾಟ್ ಸವಿಯಲು ಸಿದ್ದ!

Must Read