September 5, 2026
Saturday, September 5, 2026
spot_img

SNACKS | ಸಂಜೆ ಕಾಫಿ ಜತೆ ಬಿಸಿಬಿಸಿ ಏನಾದ್ರೂ ಬೇಕೆನಿಸಿದರೆ ಈ ಕ್ಯಾಪ್ಸಿಕಂ ಬಜ್ಜಿ ಟ್ರೈ ಮಾಡಿ

ಸಂಜೆ ಟೈಮ್‌ ಕಾಫಿ ಜತೆ ಸವಿಯಲು ಏನಾದರೂ ಬಿಸಿಬಿಸಿ ಬೇಕೆನಿಸುವುದು ಸಹಜ. ಆಗ ದಿಢೀರ್ ಅಂತ ಈ ಕ್ಯಾಪ್ಸಿಕಂ ಬಜ್ಜಿಯನ್ನು ಮಾಡಬಹುದು. ಮನೆಯಲ್ಲೇ ಇರುವಂತಹ ಸಾಮಾಗ್ರಿಗಳನ್ನು ಬಳಸಿ, ಕಡಿಮೆ ಸಮಯದಲ್ಲಿ ಈ ಬಜ್ಜಿಯನ್ನು ಮಾಡಿ ತಿನ್ನಬಹುದು.

ಬೇಕಾಗುವ ಸಾಮಗ್ರಿಗಳು

ಕ್ಯಾಪ್ಸಿಕಂ
ಕಡಲೆಹಿಟ್ಟು
ಅಕ್ಕಿಹಿಟ್ಟು
ಅಚ್ಚಖಾರದ ಪುಡಿ
ಓಂಕಾಳು
ಅಡುಗೆ ಸೋಡಾ
ಇಂಗು
ಉಪ್ಪು
ಎಣ್ಣೆ

ಮಾಡುವ ವಿಧಾನ

ಮೊದಲು ಕ್ಯಾಪ್ಸಿಕಂನನ್ನು ತೊಳೆದು ಉದ್ದುದ್ದವಾಗಿ ಹೆಚ್ಚಿ, ಬೀಜಗಳನ್ನು ತೆಗೆಯಬೇಕು. ಬಳಿಕ ಒಂದು ಪಾತ್ರೆಯಲ್ಲಿ ಕಡಲೆಹಿಟ್ಟು, ಅಕ್ಕಿಹಿಟ್ಟು, ಖಾರದ ಪುಡಿ, ಓಂಕಾಳು, ಇಂಗು, ಅಡುಗೆ ಸೋಡಾ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಚೆನ್ನಾಗಿ ಬೆರೆಸಿ, ಸ್ವಲ್ಪ ಸ್ವಲ್ಪವೇ ನೀರು ಸೇರಿಸುತ್ತಾ ಗಂಟಿಲ್ಲದಂತೆ ಕಲಸಿಕೊಳ್ಳಬೇಕು. ನಂತರ 1 ಚಮಚ ಬಿಸಿ ಎಣ್ಣೆಯನ್ನು ಈ ಹಿಟ್ಟಿಗೆ ಸೇರಿಸಿ ಮಿಕ್ಸ್ ಮಾಡಬೇಕು.

ನಂತರ ಒಂದು ಬಾಣಲೆಯಲ್ಲಿ ಎಣ್ಣೆಯನ್ನು ಚೆನ್ನಾಗಿ ಕಾಯಿಸಿ ಎಣ್ಣೆ ಕಾದ ನಂತರ, ಹೆಚ್ಚಿದ ಕ್ಯಾಪ್ಸಿಕಂನನ್ನು ಹಿಟ್ಟಿನಲ್ಲಿ ಅದ್ದಿ ಎಣ್ಣೆಗೆ ಬಿಡಬೇಕು. ಬಜ್ಜಿಯ ಎರಡು ಬದಿಗಳು ಹೊಂಬಣ್ಣಕ್ಕೆ ಬಂದು ಗರಿಗರಿಯಾಗುವವರೆಗೆ ಕರಿದರೆ, ಬಿಸಿಬಿಸಿ ಕ್ಯಾಪ್ಸಿಕಂ ಬಜ್ಜಿ ಸಿದ್ಧ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !