ನಾಲಿಗೆಗೆ ರುಚಿ ಕೊಡೋ ಸೌತೆಕಾಯಿ ಕಡಲೆಕಾಳು ಸಲಾಡ್ ನೀವು ಒಮ್ಮೆ ಟ್ರೈ ಮಾಡಿ:
ನೆನೆಸಿ ಬೇಯಿಸಿದ ಕಡಲೆಕಾಳು:
ಸೌತೆಕಾಯಿ
ಟೊಮೆಟೊ
ಈರುಳ್ಳಿ
ಹಸಿಮೆಣಸಿನಕಾಯಿ
ಕೊತ್ತಂಬರಿ ಸೊಪ್ಪು
ನಿಂಬೆಹಣ್ಣಿನ ರಸ
ಚಾಟ್ ಮಸಾಲ
ಜೀರಿಗೆ ಪುಡಿ
ಉಪ್ಪು
ಮೊದಲು ಒಂದು ಬೌಲ್ ತಗೊಳ್ಳಿ. ಅದಕ್ಕೆ ಬೇಯಿಸಿ ಇಟ್ಟುಕೊಂಡಿರೋ ಕಡಲೆಕಾಳನ್ನು ಹಾಕಿ. ಈಗ ಹೆಚ್ಚಿಟ್ಟುಕೊಂಡಿರೋ ಸೌತೆಕಾಯಿ, ಈರುಳ್ಳಿ, ಟೊಮೆಟೊ ಮತ್ತು ಸಣ್ಣಗೆ ಹೆಚ್ಚಿದ ಹಸಿಮೆಣಸಿನಕಾಯಿಯನ್ನು ಆ ಬೌಲ್ಗೆ ಸೇರಿಸಿ. ಇದರ ಮೇಲೆ ಚಾಟ್ ಮಸಾಲ, ಹುರಿದ ಜೀರಿಗೆ ಪುಡಿ, ಉಪ್ಪು ಉದುರಿಸಿ. ಕೊನೆಯಲ್ಲಿ ಫ್ರೆಶ್ ಆಗಿರೋ ನಿಂಬೆಹಣ್ಣಿನ ರಸವನ್ನು ಹಿಂಡಿ, ಮೇಲೆ ಕೊತ್ತಂಬರಿ ಸೊಪ್ಪನ್ನು ಚೆನ್ನಾಗಿ ಉದುರಿಸಿ.
ಒಂದು ಸ್ಪೂನ್ ತಗೊಂಡು ಎಲ್ಲವನ್ನೂ ಚೆನ್ನಾಗಿ ಮಿಕ್ಸ್ ಮಾಡಿ. ಮಸಾಲೆ ಎಲ್ಲಾ ಕಾಳು ಮತ್ತು ಸೌತೆಕಾಯಿಗೆ ಹಿಡಿಯಬೇಕು. ಅಷ್ಟೇ, ಸಲಾಡ್ ರೆಡಿ!



