September 28, 2026
Monday, September 28, 2026
spot_img

SNACKS | 20 ನಿಮಿಷಗಳಲ್ಲಿ ರೆಡಿಯಾಗುತ್ತೆ ಕೆಎಫ್‌ಸಿ ಸ್ಟೈಲ್ ಚಿಕನ್ ಪಾಪ್‌ಕಾರ್ನ್.. ಸ್ನ್ಯಾಕ್ಸ್‌ಗೆ ಬೆಸ್ಟ್ ಒಪ್ಶನ್

ಮನೆಯಲ್ಲೇ ಕೆಎಫ್‌ಸಿ ಶೈಲಿಯ ಕ್ರಿಸ್ಪಿ ಚಿಕನ್ ಪಾಪ್‌ಕಾರ್ನ್ ಮಾಡುವ ಸುಲಭ ವಿಧಾನ ಇಲ್ಲಿದೆ.

ಬೇಕಾಗುವ ಸಾಮಗ್ರಿಗಳು:

  • ಬೋನ್-ಲೆಸ್ ಚಿಕನ್ (ಚಿಕ್ಕದಾಗಿ ಕತ್ತರಿಸಿದ್ದು) – 250 ಗ್ರಾಂ
  • ಮೈದಾ ಹಿಟ್ಟು – 1 ಕಪ್
  • ಕಾರ್ನ್ ಫ್ಲೋರ್ – 2 ಚಮಚ
  • ಶುಂಠಿ-ಬೆಳ್ಳುಳ್ಳಿ ಪೇಸ್ಟ್ – 1 ಚಮಚ
  • ಅಚ್ಚಖಾರದ ಪುಡಿ ಮತ್ತು ಕಾಳುಮೆಣಸಿನ ಪುಡಿ- ತಲಾ 1 ಚಮಚ
  • ಮೊಟ್ಟೆ – 1
  • ಎಣ್ಣೆ – ಕರಿಯಲು

ಮಾಡುವ ವಿಧಾನ:

ಮೊದಲು ಒಂದು ಬೌಲ್‌ನಲ್ಲಿ ತೊಳೆದ ಚಿಕನ್ ತುಂಡುಗಳನ್ನು ತೆಗೆದುಕೊಳ್ಳಿ. ಇದಕ್ಕೆ ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಖಾರದ ಪುಡಿ, ಕಾಳುಮೆಣಸಿನ ಪುಡಿ, ರುಚಿಗೆ ತಕ್ಕಷ್ಟು ಉಪ್ಪು ಮತ್ತು ಒಂದು ಮೊಟ್ಟೆಯನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ 15 ನಿಮಿಷ ನೆನೆಯಲು ಬಿಡಿ.

ಮತ್ತೊಂದು ಪಾತ್ರೆಯಲ್ಲಿ ಮೈದಾ ಹಿಟ್ಟು, ಕಾರ್ನ್ ಫ್ಲೋರ್ ಮತ್ತು ಸ್ವಲ್ಪ ಉಪ್ಪು ಹಾಕಿ ಮಿಶ್ರಣ ಮಾಡಿ. ಈಗ ಮ್ಯಾರಿನೇಟ್ ಮಾಡಿದ ಚಿಕನ್ ತುಂಡುಗಳನ್ನು ಈ ಹಿಟ್ಟಿನಲ್ಲಿ ಹಾಕಿ ಚೆನ್ನಾಗಿ ರೋಲ್ ಮಾಡಿ (ಕೋಟಿಂಗ್ ಮಾಡಿ). ನಂತರ ಇವುಗಳನ್ನು ತಣ್ಣೀರಿನಲ್ಲಿ ಒಮ್ಮೆ ಅದ್ದಿ, ಮತ್ತೊಮ್ಮೆ ಒಣ ಹಿಟ್ಟಿನಲ್ಲಿ ಕೋಟ್ ಮಾಡಿ. ಇದರಿಂದ ಪಾಪ್‌ಕಾರ್ನ್ ಹೆಚ್ಚು ಕ್ರಿಸ್ಪಿಯಾಗbaseline ಬರುತ್ತದೆ.

ಬಾಣಲೆಯಲ್ಲಿ ಎಣ್ಣೆ ಕಾಯಿಸಿ, ಕೋಟ್ ಮಾಡಿದ ಚಿಕನ್ ತುಂಡುಗಳನ್ನು ಮಧ್ಯಮ ಉರಿಯಲ್ಲಿ ಗೋಲ್ಡನ್ ಬ್ರೌನ್ ಬಣ್ಣ ಬರುವವರೆಗೆ ಕರಿಯಿರಿ.

ಈಗ ಬಿಸಿಬಿಸಿಯಾದ, ಗರಿಗರಿಯಾದ ಚಿಕನ್ ಪಾಪ್‌ಕಾರ್ನ್ ಸವಿಯಲು ಸಿದ್ಧ! ಇದನ್ನು ಟೊಮೆಟೊ ಸಾಸ್ ಜೊತೆ ಸವಿಯಿರಿ.

Must Read