ಬೇಕಾಗುವ ಪದಾರ್ಥಗಳು
ಮೈದಾ ಹಿಟ್ಟು
ಬೆಣ್ಣೆ
ಸಕ್ಕರೆ ಪುಡಿ
ಪಿಸ್ತಾ
ಏಲಕ್ಕಿ ಪುಡಿ
ಬೇಕಿಂಗ್ ಪೌಡರ್
ಉಪ್ಪು
ಮಾಡುವ ವಿಧಾನ
ಒಂದು ಬೌಲ್ನಲ್ಲಿ ಮೆತ್ತಗಿರುವ ಬೆಣ್ಣೆ ಮತ್ತು ಸಕ್ಕರೆ ಪುಡಿಯನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಅದಕ್ಕೆ ಮೈದಾ, ಬೇಕಿಂಗ್ ಪೌಡರ್, ಏಲಕ್ಕಿ ಪುಡಿ ಹಾಗೂ ಉಪ್ಪು ಸೇರಿಸಿ ಚಪಾತಿ ಹಿಟ್ಟಿನಂತೆ ನಾದಿಕೊಳ್ಳಿ. ಈಗ ಹೆಚ್ಚಿಟ್ಟುಕೊಂಡ ಪಿಸ್ತಾ ಚೂರುಗಳನ್ನು ಸೇರಿಸಿ ಹಿಟ್ಟನ್ನು ಚಿಕ್ಕ ಚಿಕ್ಕ ಉಂಡೆಗಳನ್ನಾಗಿ ಮಾಡಿ, ಕುಕೀಸ್ ಆಕಾರದಲ್ಲಿ ತಟ್ಟಿ. ಓವೆನ್ನಲ್ಲಿ ಕಡಿಮೆ ಉರಿಯಲ್ಲಿ 12 ರಿಂದ 15 ನಿಮಿಷ ಬೇಯಿಸಿದರೆ ಗರಿಗರಿಯಾದ ಪಿಸ್ತಾ ಕುಕೀಸ್ ಸಿದ್ಧ.



