ಬೇಕಾಗುವ ಸಾಮಗ್ರಿಗಳು:
ಗೋಧಿ ಹಿಟ್ಟು
ಗೋಡಂಬಿ
ಬೆಣ್ಣೆ
ಸಕ್ಕರೆ ಪುಡಿ
ಏಲಕ್ಕಿ ಪುಡಿ
ಬೇಕಿಂಗ್ ಪೌಡರ್
ಉಪ್ಪು
ಮಾಡುವ ವಿಧಾನ:
ಒಂದು ಪಾತ್ರೆಗೆ ಬೆಣ್ಣೆ ಮತ್ತು ಸಕ್ಕರೆ ಪುಡಿ ಹಾಕಿ ಚನ್ನಾಗಿ ಕಲಸಿ. ಇದಕ್ಕೆ ಗೋಧಿ ಹಿಟ್ಟು, ಗೋಡಂಬಿ ಪುಡಿ, ಬೇಕಿಂಗ್ ಪೌಡರ್, ಏಲಕ್ಕಿ ಪುಡಿ ಹಾಗೂ ಚಿಟಿಕೆ ಉಪ್ಪು ಹಾಕಿ ಚನ್ನಾಗಿ ಚಪಾತಿ ಹಿಟ್ಟಿನ ಹದಕ್ಕೆ ನಾದಿಕೊಳ್ಳಿ. ಹಿಟ್ಟನ್ನು ಸ್ವಲ್ಪ ದಪ್ಪವಾಗಿ ಲಟ್ಟಿಸಿ, ಕುಕಿ ಕಟರ್ ಅಥವಾ ಸಣ್ಣ ಮುಚ್ಚಳದ ಸಹಾಯದಿಂದ ಅರ್ಧ ಚಂದ್ರಾಕಾರದಲ್ಲಿ ಕತ್ತರಿಸಿ.
180°C ಗೆ ಪ್ರಿ-ಹೀಟ್ ಮಾಡಿದ ಓವನ್‌ನಲ್ಲಿ 12–15 ನಿಮಿಷ ಬೇಕ್ ಮಾಡಿ. ಓವನ್ ಇಲ್ಲದಿದ್ದರೆ ಕುಕ್ಕರ್ ಇಟ್ಟು ಅದಕ್ಕೆ ಉಪ್ಪು ಹಾಕಿ, ಅದರ ಮೇಲೆ ತಟ್ಟೆಯಿಟ್ಟು ಸಣ್ಣ ಉರಿಯಲ್ಲಿ 15–20 ನಿಮಿಷ ಮುಚ್ಚಿ ಬೇಕ್ ಮಾಡಿ. ಬಿಸ್ಕೆಟ್ ಸಂಪೂರ್ಣವಾಗಿ ತಣ್ಣಗಾದ ಮೇಲೆ ಗರಿಗರಿಯಾಗುತ್ತವೆ ನಂತರ ಗಾಳಿಯಾಡದ ಡಬ್ಬದಲ್ಲಿ ಶೇಖರಿಸಿ.
ಈಗ ಬಾಯಲ್ಲಿ ನೀರೂರಿಸುವ ಕಾಜು ಬಿಸ್ಕೆಟ್ ಸವಿಯಲು ಸಿದ್ಧ!



