Monday, December 8, 2025

Snacks Series 10 | ಕ್ರಿಸ್ಪಿ ಪೊಟೇಟೊ ಸ್ಟಿಕ್ಸ್! ನೀವೂ ಮಾಡ್ಬಹುದು, ತುಂಬಾನೇ ಸುಲಭ

ಮನೆಯಲ್ಲೇ ಹೋಟೆಲ್ ಸ್ಟೈಲ್ ಸ್ನ್ಯಾಕ್ ತಯಾರಿಸಬೇಕು ಅನ್ನಿಸಿದರೆ ಕ್ರಿಸ್ಪಿ ಪೊಟೇಟೊ ಸ್ಟಿಕ್ಸ್ ಸೂಕ್ತ ಆಯ್ಕೆ. ಮನೆಮಂದಿ ಇಷ್ಟಪಡುವ ಈ ಸ್ನ್ಯಾಕ್‌ ಅನ್ನು ಟೀ ಟೈಮ್‌, ಪಾರ್ಟಿ ಅಥವಾ ಸಂಜೆ ವೇಳೆ ತಿನ್ನೋಕೆ ಸುಲಭವಾಗಿ ಮಾಡಿಕೊಳ್ಳಬಹುದು.

ಬೇಕಾಗುವ ಸಾಮಗ್ರಿಗಳು

ಆಲೂಗಡ್ಡೆ – 3
ಕಾರ್ನ್ ಫ್ಲೋರ್ – 2 ಟೇಬಲ್ ಸ್ಪೂನ್
ಮೈದಾ – 1 ಟೇಬಲ್ ಸ್ಪೂನ್
ಅರಿಶಿನ ಪುಡಿ – ಚಿಟಿಕೆ
ಕೆಂಪು ಮೆಣಸಿನ ಪುಡಿ – 1 ಟೀ ಸ್ಪೂನ್
ಗರಂ ಮಸಾಲಾ – ½ ಟೀ ಸ್ಪೂನ್
ಉಪ್ಪು – ರುಚಿಗೆ
ಚಾಟ್ ಮಸಾಲಾ – ಸ್ವಲ್ಪ
ಎಣ್ಣೆ – ಹುರಿಯಲು

ತಯಾರಿಸುವ ವಿಧಾನ

ಮೊದಲು ಆಲೂಗಡ್ಡೆಯನ್ನು ತೊಳೆದು ಸಿಪ್ಪೆ ತೆಗೆದು ಸಣ್ಣ ಸಣ್ಣ ಉದ್ದದ ಸ್ಟಿಕ್ಸ್ ಆಕಾರಕ್ಕೆ ಕತ್ತರಿಸಿಕೊಳ್ಳಿ. ಈ ಸ್ಟಿಕ್ಸ್‌ಗಳನ್ನು ನೀರಿನಲ್ಲಿ 10 ನಿಮಿಷ ನೆನೆಸಿ ನಂತರ ನೀರು ತೆಗೆದು ಚೆನ್ನಾಗಿ ಒರೆಸಿಕೊಳ್ಳಿ. ಇದರಿಂದ ಹೆಚ್ಚುವರಿ ಸ್ಟಾರ್ಚ್ ಹೋಗಿ ಸ್ಟಿಕ್ಸ್ ಹೆಚ್ಚು ಕ್ರಿಸ್ಪಿಯಾಗುತ್ತವೆ.

ಒಂದು ಬೌಲ್‌ನಲ್ಲಿ ಆಲೂ ಸ್ಟಿಕ್ಸ್‌ ಹಾಕಿ, ಕಾರ್ನ್ ಫ್ಲೋರ್, ಮೈದಾ, ಅರಿಶಿನ ಪುಡಿ, ಕೆಂಪು ಮೆಣಸಿನ ಪುಡಿ, ಗರಂ ಮಸಾಲಾ ಮತ್ತು ಉಪ್ಪು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ಸ್ಟಿಕ್ಸ್‌ಗೆ ನೀರು ಹಾಕಬೇಡಿ.

ಕಡಾಯಿಯಲ್ಲಿ ಎಣ್ಣೆ ಕಾದಾಗ ಮಧ್ಯಮ ಉರಿಯಲ್ಲಿ ಸ್ಟಿಕ್ಸ್‌ಗಳನ್ನು ಸ್ವಲ್ಪಸ್ವಲ್ಪವಾಗಿ ಹಾಕಿ ಗೋಲ್ಡನ್ ಬ್ರೌನ್ ಆಗುವವರೆಗೆ ಹುರಿಯಿರಿ. ಹುರಿದ ನಂತರ ಎಣ್ಣೆ ಚೆನ್ನಾಗಿ ಒತ್ತಿ ತೆಗೆದು ಮೇಲೆ ಸ್ವಲ್ಪ ಚಾಟ್ ಮಸಾಲಾ ಹಾಕಿ.

error: Content is protected !!