ಮಕ್ಕಳಿಂದ ಹಿಡಿದು ಎಲ್ಲರಿಗು ಇಷ್ಟವಾಗುವ ಸ್ನ್ಯಾಕ್ ಎಂದರೆ ಪನೀರ್ ನಗೆಟ್ಸ್. ಹೊರಗೆ ಕ್ರಿಸ್ಪಿ, ಒಳಗೆ ಸಾಫ್ಟ್ ಆಗಿರುವ ಈ ನಗೆಟ್ಸ್‌ಗಳನ್ನು ಮನೆಯಲ್ಲೇ ಸುಲಭವಾಗಿ ತಯಾರಿಸಬಹುದು. ಸಂಜೆ ಟೀ ಜೊತೆಗೂ, ಪಾರ್ಟಿ ಸ್ಟಾರ್ಟರ್ ಆಗಿಯೂ ಇದೊಂದು ಪರ್ಫೆಕ್ಟ್ ಆಯ್ಕೆ. ಕಡಿಮೆ ಸಮಯದಲ್ಲಿ ರುಚಿಯಾದ ಈ ಪನೀರ್ ನಗೆಟ್ಸ್ ರೆಸಿಪಿ ಇಲ್ಲಿದೆ ನೋಡಿ.
ಬೇಕಾಗುವ ಸಾಮಗ್ರಿಗಳು
ಪನೀರ್ – 1 ಕಪ್
ಬೇಯಿಸಿದ ಆಲೂಗಡ್ಡೆ – 1
ಕೊತ್ತಂಬರಿ ಸೊಪ್ಪು – 2 ಟೇಬಲ್ ಸ್ಪೂನ್
ಹಸಿಮೆಣಸು – 1 (ಸಣ್ಣದು)
ಶುಂಠಿ-ಬೆಳ್ಳುಳ್ಳಿ ಪೇಸ್ಟ್ – 1 ಟೀ ಸ್ಪೂನ್
ಮೆಣಸಿನಕಾಯಿ ಪುಡಿ – ½ ಟೀ ಸ್ಪೂನ್
ಗರಂ ಮಸಾಲಾ – ½ ಟೀ ಸ್ಪೂನ್
ಉಪ್ಪು – ರುಚಿಗೆ
ಮೈದಾ – 2 ಟೇಬಲ್ ಸ್ಪೂನ್
ಬ್ರೆಡ್ ಕ್ರಂಬ್ಸ್ – ಬೇಕಾದಷ್ಟು
ಎಣ್ಣೆ – ಡೀಪ್ ಫ್ರೈಗೆ
ತಯಾರಿಸುವ ವಿಧಾನ
ಒಂದು ಬೌಲ್‌ನಲ್ಲಿ ಪನೀರ್, ಮ್ಯಾಶ್ ಮಾಡಿದ ಆಲೂಗಡ್ಡೆ, ಹಸಿಮೆಣಸು, ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಮಸಾಲೆಗಳು, ಉಪ್ಪು, ಕೊತ್ತಂಬರಿ ಸೊಪ್ಪು ಸೇರಿಸಿ ಚೆನ್ನಾಗಿ ಕಲಸಿ. ಸಣ್ಣ ನಗೆಟ್ಸ್ ಆಕಾರಕ್ಕೆ ಮಾಡಿಕೊಳ್ಳಿ. ಮೊದಲು ಮೈದಾ ಸ್ಲರಿಯಲ್ಲಿ ಡಿಪ್ ಮಾಡಿ, ನಂತರ ಬ್ರೆಡ್ ಕ್ರಂಬ್ಸ್‌ನಲ್ಲಿ ಉರುಳಿಸಿ. ಬಿಸಿ ಎಣ್ಣೆಯಲ್ಲಿ ಗೋಲ್ಡನ್ ಕಲರ್ ಬರುವವರೆಗೂ ಡೀಪ್ ಫ್ರೈ ಮಾಡಿ. ಟೊಮೆಟೋ ಸಾಸ್ ಅಥವಾ ಮಯೋನೀಸ್ ಜೊತೆ ಸವಿಯಿರಿ.

