July 12, 2026
Sunday, July 12, 2026
spot_img

Snacks | ಸ್ಟ್ರೀಟ್ ಸ್ಟೈಲ್ ಪನೀರ್ ಸ್ಯಾಂಡ್ ವಿಚ್ ಟ್ರೈ ಮಾಡಿ! ಪ್ಲೇಟ್ ಖಾಲಿಯಾಗೋದು ಪಕ್ಕಾ

ಸಂಜೆಯ ಹೊತ್ತಿನಲ್ಲಿ ತಿನ್ನೋಕೆ ಟೇಸ್ಟಿ ಸ್ನ್ಯಾಕ್ ಬೇಕು ಅನ್ಸುತ್ತೆ ಅಲ್ವಾ? ಅಂಥ ಸಮಯಕ್ಕೆ ಪನೀರ್ ಸ್ಯಾಂಡ್ ವಿಚ್ ಪರ್ಫೆಕ್ಟ್ ಆಯ್ಕೆ. ಕಡಿಮೆ ಸಮಯದಲ್ಲಿ ತಯಾರಾಗುವ, ಆರೋಗ್ಯಕರವೂ ಆಗಿರುವ ಈ ಸ್ನ್ಯಾಕ್ ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಎಲ್ಲರಿಗೂ ಇಷ್ಟವಾಗುತ್ತದೆ.

ಬೇಕಾಗುವ ಸಾಮಗ್ರಿಗಳು:

ಬ್ರೆಡ್ ಸ್ಲೈಸ್ – 4
ಪನೀರ್ – 1 ಕಪ್ (ಚಿಕ್ಕ ಚಿಕ್ಕ ತುಂಡು)
ಈರುಳ್ಳಿ – 1
ಕ್ಯಾಪ್ಸಿಕಂ – ½ ಕಪ್
ಹಸಿರು ಮೆಣಸಿನಕಾಯಿ – 1
ಉಪ್ಪು – ರುಚಿಗೆ ತಕ್ಕಷ್ಟು
ಮೆಣಸಿನ ಪುಡಿ – ½ ಟೀ ಸ್ಪೂನ್
ಚಾಟ್ ಮಸಾಲಾ – ½ ಟೀ ಸ್ಪೂನ್
ಬೆಣ್ಣೆ – ಅಗತ್ಯಕ್ಕೆ ತಕ್ಕಷ್ಟು
ಕೋತ್ತಂಬರಿ ಸೊಪ್ಪು – ಸ್ವಲ್ಪ

ತಯಾರಿಸುವ ವಿಧಾನ:

ಒಂದು ಬೌಲ್‌ನಲ್ಲಿ ಪನೀರ್, ಈರುಳ್ಳಿ, ಕ್ಯಾಪ್ಸಿಕಂ, ಹಸಿರು ಮೆಣಸಿನಕಾಯಿ, ಉಪ್ಪು, ಮೆಣಸಿನ ಪುಡಿ, ಚಾಟ್ ಮಸಾಲಾ ಮತ್ತು ಕೋತ್ತಂಬರಿ ಸೊಪ್ಪು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ.

ಬ್ರೆಡ್ ಸ್ಲೈಸ್ ಗಳ ಒಂದು ಬದಿಗೆ ಬೆಣ್ಣೆ ಹಚ್ಚಿ. ಇನ್ನೊಂದು ಬದಿ ಬ್ರೆಡ್ ಮೇಲೆ ಪನೀರ್ ಮಿಶ್ರಣವನ್ನು ಸಮವಾಗಿ ಹಚ್ಚಿ, ಇನ್ನೊಂದು ಬ್ರೆಡ್‌ನಿಂದ ಮುಚ್ಚಿ. ಸ್ಯಾಂಡ್ ವಿಚ್ ತವಾ ಅಥವಾ ಪ್ಯಾನ್‌ನಲ್ಲಿ ಎರಡೂ ಬದಿ ಚಿನ್ನದ ಬಣ್ಣ ಬರುವವರೆಗೂ ಬೇಯಿಸಿ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !