August 10, 2026
Monday, August 10, 2026
spot_img

Snacks | ರಿಮ್‌ಝಿಮ್ ಮಳೆಗೆ ಬಾಯಲ್ಲಿ ನೀರೂರಿಸುವ ‘ಸ್ವೀಟ್ ಕಾರ್ನ್ ಪಕೋಡ’ ಒಮ್ಮೆ ಟ್ರೈ ಮಾಡಿ

ಹೊರಗಡೆ ಮಳೆ ಹನಿ ಬೀಳ್ತಿರುವಾಗ.. ಇತ್ತ ಕಡೆ ಕಾದ ಎಣ್ಣೆಯಿಂದ ಬಿಸಿಸಿ ಬಿಸಿಯಾಗಿ ತೆಗಿಯೊ ಕಾರ್ನ್ ಪಕೋಡ ತಿಂದ್ರೆ ಆ ಮಜಾನೇ ಬೇರೆ! ಮನೆಯಲ್ಲೇ ಸಿಂಪಲ್ಲಾಗಿ, ಮಸ್ತ್ ಕ್ರಿಸ್ಪಿಯಾಗಿ ಮಾಡೋ ಸಖತ್ ರೆಸಿಪಿ ಇಲ್ಲಿದೆ ನೋಡಿ.

ಬೇಕಾಗುವ ಸಾಮಗ್ರಿಗಳು:

  • ಸ್ವೀಟ್ ಕಾರ್ನ್: 1 ಕಪ್
  • ಕಡಲೆ ಹಿಟ್ಟು: 1/2 ಕಪ್
  • ಅಕ್ಕಿ ಹಿಟ್ಟು: 2 ಚಮಚ
  • ಈರುಳ್ಳಿ: 1
  • ಹಸಿಮೆಣಸಿನಕಾಯಿ: 2-3
  • ಶುಂಠಿ-ಬೆಳ್ಳುಳ್ಳಿ ಪೇಸ್ಟ್: 1 ಚಮಚ
  • ಖಾರದ ಪುಡಿ: 1/2 ಚಮಚ
  • ಚಿಟಿಕೆ ಅರಿಶಿನ ಹಾಗೂ ಇಂಗು
  • ಕೊತ್ತಂಬರಿ ಸೊಪ್ಪು & ಕರಿಬೇವು
  • ಉಪ್ಪು
  • ಎಣ್ಣೆ

ಮಾಡುವ ವಿಧಾನ:

ಮೊದಲು ಸ್ವೀಟ್ ಕಾರ್ನ್ ಕಾಳುಗಳನ್ನು ಮಿಕ್ಸಿ ಜಾರಿಗೆ ಹಾಕಿ, ನೀರು ಹಾಕದೆ ಸುಮ್ನೆ ಒಂದೇ ಒಂದು ರೌಂಡ್ ತರಿತರಿಯಾಗಿ ರುಬ್ಬಿಕೊಳ್ಳಿ. ಈಗ ಒಂದು ಬೌಲ್‌ಗೆ ರುಬ್ಬಿದ ಕಾರ್ನ್, ಹೆಚ್ಚಿದ ಈರುಳ್ಳಿ, ಹಸಿಮೆಣಸಿನಕಾಯಿ, ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಕೊತ್ತಂಬರಿ ಹಾಗೂ ಕರಿಬೇವು ಹಾಕಿ. ಅದಕ್ಕೆ ಕಡಲೆ ಹಿಟ್ಟು, ಅಕ್ಕಿ ಹಿಟ್ಟು, ಖಾರದ ಪುಡಿ, ಅರಿಶಿನ, ಇಂಗು ಮತ್ತು ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಈ ಮಿಶ್ರಣಕ್ಕೆ ನೀರು ಸೇರಿಸಬೇಡಿ, ಕಾರ್ನ್ ಮತ್ತು ಈರುಳ್ಳಿಯಲ್ಲೇ ನೀರಿನಾಂಶ ಇರುತ್ತೆ, ಅದ್ರಲ್ಲೇ ಹಿಟ್ಟು ಹದವಾಗಿ ಕಲಸಿಕೊಳ್ಳಿ. ತುಂಬಾ ನೀರಾದರೆ ಪಕೋಡ ಗರಿಗರಿಯಾಗಲ್ಲ. ಬೇಕಿದ್ರೆ ಕೊನೆಯಲ್ಲಿ 1 ಚಮಚ ಕಾದ ಎಣ್ಣೆ ಹಾಕಿ ಕಲಸಿದರೆ ಪಕೋಡ ಇನ್ನು ಮಸ್ತ್ ಆಗಿ ಬರುತ್ತೆ.

ಬಾಣಲೆಯಲ್ಲಿ ಎಣ್ಣೆ ಕಾಯೋಕೆ ಇಡಿ. ಎಣ್ಣೆ ಚೆನ್ನಾಗಿ ಬಿಸಿಯಾದ ಮೇಲೆ, ಒಲೆ ಉರಿಯನ್ನು ಮಧ್ಯಮಕ್ಕೆ ಇಟ್ಟು, ಕಲಸಿದ ಹಿಟ್ಟನ್ನು ಸಣ್ಣ ಸಣ್ಣ ಉಂಡೆಗಳಾಗಿ ಅಥವಾ ಪಕೋಡ ತರ ಎಣ್ಣೆಗೆ ಬಿಡಿ. ಎರಡೂ ಕಡೆ ತಿರುಗಿಸಿ ಹಾಕಿ, ಪಕೋಡ ಚಿನ್ನದ ಬಣ್ಣ ಬರೋವರೆಗೂ ಚೆನ್ನಾಗಿ ಕರಿಯಿರಿ.

ಈಗ ಬಿಸಿಬಿಸಿಯಾದ ಸಖತ್ ಟೇಸ್ಟಿ ಕಾರ್ನ್ ಪಕೋಡ ರೆಡಿ! ಇದರ ಜೊತೆ ಒಂದು ಕಪ್ ಬಿಸಿ ಬಿಸಿ ಫಿಲ್ಟರ್ ಕಾಫಿ ಅಥವಾ ಮಸಾಲ ಚಾಯ್ ಇದ್ರೆ, ಹೊರಗಡೆ ಎಷ್ಟೇ ಮಳೆ ಬಂದ್ರೂ ಒಳಗಡೆ ಫುಲ್ ಖುಷಿ.

    Must Read

    error: Copy ಬೇಡ, Coffee ಜೊತೆ ಹಂಚಿಕೊಳ್ಳಿ !