ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಾರಿನ ಬ್ಯಾನೆಟ್ ಒಳಗೆ, ಬೈಕ್ನೊಳಗೆ, ಶೂನಲ್ಲಿ, ಮನೆಯೊಳಗೆ ಎಲ್ಲೆಂದರಲ್ಲಿ ನುಗ್ಗುವ ಹಾವುಗಳು ಹೆಲ್ಮೆಟ್ ಅನ್ನೂ ಬಿಟ್ಟಿಲ್ಲ. ವ್ಯಕ್ತಿಯೊಬ್ಬರ ಹೆಲ್ಮೆಟ್ನೊಳಗೆ ನುಗ್ಗಿದ ನಾಗರ ಹಾವೊಂದು ಹಾಯಾಗಿ ರೆಸ್ಟ್ ಮಾಡುತ್ತಿತ್ತು. ಜನರ ಮಾತಿನ ಶಬ್ದ ಕೇಳುತ್ತಿದ್ದಂತೆ ಹೆಡೆ ಎತ್ತಿ ಬುಸ್ ಬುಸ್ ಎಂದು ಕಚ್ಚಲು ಮುಂದಾಗಿರುವ ವಿಡಿಯೋ ಸದ್ಯ ನೆಟ್ನಲ್ಲಿ ಸದ್ದು ಮಾಡುತ್ತಿದೆ.
ಚಳಿ, ಮಳೆಗಾಲ, ಬೇಸಿಗೆ ಯಾವುದೇ ಋತುಮಾನವಿರಲಿ ವಿಷ ಜಂತುಗಳ ಬಗ್ಗೆ ಜಾಗರೂಕರಾಗಿರಿ. ನೀವು ಧರಿಸುವ ಬಟ್ಟೆ, ಶೂ, ಚಪ್ಪಲಿ, ವಾಹನಗಳಾಗಿರಬಹುದು ಎಲ್ಲವನ್ನು ಒಮ್ಮೆ ಪರಿಶೀಲಿಸಿ ನೋಡುವುದು ಉತ್ತಮ.
View this post on Instagram