SHOCKING VIDEO| ಹೂಕೋಸಿನಲ್ಲಿ ಹಾವು ಎಲ್ಲಿಂದ ಬಂತು ಶಿವಾ..?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಹೋಟೆಲ್‌ಗೆ ಹೋದಾಗ ಅಥವಾ ಆನ್‌ಲೈನ್‌ನಲ್ಲಿ ಆಹಾರವನ್ನು ಆರ್ಡರ್ ಮಾಡಿದಾಗ, ಕೆಲವೊಮ್ಮೆ ನಾವು ತಿನ್ನುವ ಆಹಾರದಲ್ಲಿ ಜಿರಳೆ, ಹಲ್ಲಿ, ಸತ್ತು ಹಾವಿನ ದೇಹ ಸಿಗುವ ಘಟನೆಗಳು ಇತ್ತೀಚೆಹೆ ಹೆಚ್ಚಾಗಿವೆ. ಇಂತಹ ಘಟನೆಗಳಿಗೆ ಸಂಬಂಧಿಸಿದ ಹಲವು ವಿಷಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಹೊರಗಿನ ಆಹಾರ ಬೇಡ ಎಂದು ತರಕಾರಿ ತಂದರೆ ಅದರಲ್ಲೂ ವಿಷಕಾರಿ ಜಂತುಗಳ ಪತ್ತೆಯಾದರೆ ಏನು ಮಾಡೋದು? ಹೌದು..ನಿಜ ಮನೆಗೆ ತಂದಿದ್ದ ಹೂಕೋಸಿನಲ್ಲಿ ಹಾವಿನ ಮರಿ ಇತ್ತು. ಇದಕ್ಕೆ ಸಂಬಂಧಿಸಿದ ವಿಡಿಯೋವೊಂದು ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.

ಈ ಘಟನೆ ಎಲ್ಲಿ ಮತ್ತು ಯಾವಾಗ ನಡೆಯಿತು ಎಂಬ ವಿವರಗಳು ತಿಳಿದಿಲ್ಲ, ಆದರೆ ದೇವೇಂದ್ರ ಶೈನಿ ಎಂಬ ಬಳಕೆದಾರರು ತಮ್ಮ ಟ್ವಿಟರ್ ಖಾತೆಯಲ್ಲಿ ಈ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಅವರು ಪೋಸ್ಟ್ ಮಾಡಿದ ವೀಡಿಯೊಗೆ “ಇದು ನಾಗರ ಹೂಕೋಸು” ಎಂದು ಶೀರ್ಷಿಕೆ ಕೊಟ್ಟಿದ್ದಾರೆ. ಈ ವೀಡಿಯೋದಲ್ಲಿ ಗಮನಿಸಿದರೆ ಹೂಕೋಸಿನಲ್ಲಿ ಪುಟ್ಟ ಹಾವೊಂದು ಕಾಣಿಸಿಕೊಂಡಿದೆ. ಮೊದಲಿಗೆ ಅದರ ತಲೆ ಮಾತ್ರ ಗೋಚರಿಸುತ್ತದೆ. ನಂತರ ಮರಿ ಹಾವು ಹೊರಗೆ ಬಂದು ತೆವಳುತ್ತಾ ಹೋಗುತ್ತದೆ. ಈ ವೀಡಿಯೋ ನೋಡಿದರೆ ಗಾಬರಿಯಾಗಿ ಜೀವ ಬಾಯಿಗೆ ಬರೋದು ಗ್ಯಾರೆಂಟಿ.

ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ವಿಭಿನ್ನವಾಗಿ ಪ್ರತಿಕ್ರಿಯಿಸುತ್ತಿದ್ದಾರೆ. ತರಕಾರಿ ಖರೀದಿಸಿದರೆ ಚೇಳು, ಹಾವು ಉಚಿತ ಎಂದು ಬಳಕೆದಾರರೊಬ್ಬರು ಪ್ರತಿಕ್ರಿಯಿಸಿದ್ದಾರೆ. ಇನ್ನು ಕೆಲವರು ಮಳೆಗಾಲವಾದ್ದರಿಂದ ತರಕಾರಿಗಳಲ್ಲಿ ಕೀಟ, ಚೇಳು, ಎರೆಹುಳು ಇತ್ಯಾದಿಗಳಿರಬಹುದು ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!