ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಳೆದ ಕೆಲವು ದಿನಗಳಿಂದ ನಿರಂತರ ಏರಿಕೆಯಾಗುತ್ತಿದ್ದ ಚಿನ್ನದ ದರ ಇಂದು ಕೊನೆಗೂ ಇಳಿಕೆಯಾಗಿದ್ದು, ಖರೀದಿದಾರರಿಗೆ ಸ್ವಲ್ಪ ನೆಮ್ಮದಿ ತಂದಿದೆ. ಇಂದು 10 ಗ್ರಾಂ ಚಿನ್ನದ ಬೆಲೆಯಲ್ಲಿ 750 ರೂ ರಷ್ಟು ಇಳಿಕೆ ದಾಖಲಾಗಿದೆ.
ಪ್ರಸ್ತುತ ಭಾರತದಲ್ಲಿ 22 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆ 1,35,000ರೂ ತಲುಪಿದ್ದು, 24 ಕ್ಯಾರಟ್ ಅಪರಂಜಿ ಚಿನ್ನದ ಬೆಲೆ 1,47,280 ರೂ ಆಗಿದೆ. ಒಂದು ಗ್ರಾಂ ಮಟ್ಟದಲ್ಲಿ ನೋಡಿದರೆ 22 ಕ್ಯಾರಟ್ ಚಿನ್ನ 13,500 ರೂ ಹಾಗೂ 24 ಕ್ಯಾರಟ್ ಚಿನ್ನ 14,728 ರೂ ದರದಲ್ಲಿ ಲಭ್ಯವಿದೆ. 18 ಕ್ಯಾರಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ 11,046 ರೂ ಆಗಿದೆ.
ಇದನ್ನೂ ಓದಿ:
ಬೆಳ್ಳಿಯ ದರದಲ್ಲಿ ಇಂದು ಯಾವುದೇ ಪ್ರಮುಖ ಬದಲಾವಣೆ ಕಾಣಿಸಿಲ್ಲ. 1 ಗ್ರಾಂ ಬೆಳ್ಳಿ 245 ರೂ ಆಗಿದ್ದು, 100 ಗ್ರಾಂ ಬೆಳ್ಳಿ 24,500 ರೂ ದರದಲ್ಲಿ ಮಾರಾಟವಾಗುತ್ತಿದೆ. ಚೆನ್ನೈ ಮತ್ತು ಕೇರಳದಲ್ಲಿ ಇದೇ ಪ್ರಮಾಣದ ಬೆಳ್ಳಿ 250 ರೂ ಪ್ರತಿ ಗ್ರಾಂ ದರದಲ್ಲಿದೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಯಲ್ಲಿ ಹೆಚ್ಚಿನ ವ್ಯತ್ಯಾಸ ಕಾಣಿಸದಿದ್ದರೂ, ದೇಶೀಯ ಮಾರುಕಟ್ಟೆಯಲ್ಲಿ ರೂಪಾಯಿ ಮೌಲ್ಯ ಹಾಗೂ ಬೇಡಿಕೆ ಆಧಾರಿತವಾಗಿ ದರಗಳಲ್ಲಿ ಸಣ್ಣ ಮಟ್ಟಿನ ಬದಲಾವಣೆ ಮುಂದುವರಿದಿದೆ.



