CINE | ಮದುವೆ ವಿಡಿಯೋವನ್ನು 50ಕೋಟಿ ರೂ.ಗೆ ಮಾರಿದ ಸೋಭಿತಾ-ನಾಗಚೈತನ್ಯ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಈಗಾಗಲೇ ನೆಟ್‌ಫ್ಲಿಕ್ಸ್‌ನಲ್ಲಿ ದೀಪಿಕಾ ಪಡುಕೋಣ್‌-ರಣ್‌ವೀರ್‌ ಸಿಂಗ್‌. ನಯನತಾರಾ-ವಿಘ್ನೇಶ್‌ ಮದುವೆಯ ವಿಡಿಯೋಗಳು ರಿಲೀಸ್‌ ಆಗಿವೆ. ಇದೀಗ ಇದೇ ಸಾಲಿಗೆ ನಾಗಚೈತನ್ಯ ಹಾಗೂ ಸೋಭಿತಾ ಕೂಡ ಸೇರ್ಪಡೆಯಾಗಿದ್ದಾರೆ.

ತಮ್ಮ ಮದುವೆ ಪ್ರಸಾರ ಹಕ್ಕನ್ನು ನೆಟ್​ಫ್ಲಿಕ್ಸ್​ಗೆ 50 ಕೋಟಿ ರೂಪಾಯಿಗೆ ಮಾರಾಟ ಮಾಡಿದೆ. ಈ ವಿಚಾರ ಸಾಕಷ್ಟು ಚರ್ಚೆಗಳನ್ನು ಹುಟ್ಟುಹಾಕಿದೆ. ಅನೇಕರು ಇದನ್ನು ಟೀಕಿಸಿದ್ದಾರೆ.

ಅಕ್ಕಿನೇನಿ ಕುಟುಂಬದ ಒಡೆತನದ ಅನ್ನಪೂರ್ಣ ಸ್ಟುಡಿಯೋದಲ್ಲಿ ನಾಗ ಚೈತನ್ಯ ಹಾಗೂ ಶೋಭಿತಾ ಧುಲಿಪಾಲ್ ವಿವಾಹ ನೆರವೇರಲಿದೆ. ಡಿಸೆಂಬರ್ 4ರಂದು ಈ ವಿವಾಹ ಏರ್ಪಡಲಿದೆ. ಈಗಾಗಲೇ ವಿವಾಹಪೂರ್ವ ಕಾರ್ಯಕ್ರಮಗಳು ಆರಂಭ ಆಗಿವೆ. ಆಪ್ತರು ಹಾಗೂ ಕುಟುಂಬದವರು ಮಾತ್ರ ಮದುವೆಗೆ ಹಾಜರಿ ಹಾಕಲಿದ್ದಾರೆ. ಈ ವಿವಾಹದ ಪ್ರಸಾರದ ಹಕ್ಕನ್ನು ನೆಟ್​ಫ್ಲಿಕ್ಸ್​ಗೆ ಈ ಜೋಡಿ ಮಾರಾಟ ಮಾಡಿದೆ ಎನ್ನಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!