Sunday, December 10, 2023

Latest Posts

ಸಾಮಾಜಿಕ ಮಾಧ್ಯಮ ನನ್ನ ಚುನಾವಣಾ ಪ್ರಚಾರದ ವೇದಿಕೆ: ಗಡ್ಕರಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ಪ್ರಚಾರಕ್ಕಾಗಿ ಸಾಮಾಜಿಕ ಮಾಧ್ಯಮ ವೇದಿಕೆಗಳನ್ನು ಬಳಸುವುದಾಗಿ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಶನಿವಾರ ಹೇಳಿದ್ದಾರೆ.

ಸಮಾಜದ ಉನ್ನತಿಗಾಗಿ ಮಾಡಿದ ಕೆಲಸ ಹಾಗೂ ಡೌನ್ ಟು ಅರ್ಥ್ ಧೋರಣೆ ತಮ್ಮ ಕ್ಷೇತ್ರದಲ್ಲಿ ತಮ್ಮ ಗೆಲುವಿಗೆ ಸಹಕಾರಿಯಾಗಲಿದೆ. ಮೊಬೈಲ್ ನೆಟ್ವರ್ಕ್ ಮತ್ತು ಸಾಮಾಜಿಕ ಜಾಲತಾಣಗಳ ಮೂಲಕ ಕ್ಷೇತ್ರದ ಜನರ ಆಶೀರ್ವಾದ ಪಡೆಯುತ್ತೇನೆ. ಜಾಹೀರಾತು ಬ್ಯಾನರ್ ಗಳನ್ನು ಬಳಸುವುದಿಲ್ಲ ಎಂದರು.

‘ಮತದಾರರು ಬುದ್ಧಿವಂತರು. ಗಂಡ ಒಂದು ಪಕ್ಷಕ್ಕೆ ಮತ ಹಾಕಿದರೆ, ಹೆಂಡತಿ ಇನ್ನೊಂದು ಪಕ್ಷಕ್ಕೆ ಮತ ಹಾಕುತ್ತಾರೆ.ಆದರೆ, ಅವರು ಎಲ್ಲಾ ರಾಜಕೀಯ ಪಕ್ಷಗಳಿಂದಲೂ ಉಡುಗೊರೆಗಳು ಮತ್ತು ಪ್ರಯೋಜನಗಳನ್ನು ಸ್ವೀಕರಿಸುತ್ತಾರೆ ಎಂದು ಗಡ್ಕರಿ ಖ್ಯಾ ಹೇಳಿದ್ದಾರೆ.

ಸಾಮಾಜಿಕ ಜಾಲತಾಣಗಳ ಮೂಲಕ ಜನರನ್ನು ತಲುಪಿ ಮತ ಯಾಚಿಸಿ, ಅಭಿವೃದ್ಧಿಗಾಗಿ ಮಾಡಿದ ಉತ್ತಮ ಕೆಲಸಗಳನ್ನು ಅವರ ಮುಂದಿಡುತ್ತೇನೆ. ನನ್ನ ಬೆಂಬಲಿಗರೇ ನನ್ನ ನಿಜವಾದ ರಾಜಕೀಯ ಆಸ್ತಿಯೇ ಹೊರತು ನನ್ನ ಕುಟುಂಬದವರಲ್ಲ. ಖಂಡಿತ ನನ್ನ ಭೌತಿಕ ಆಸ್ತಿ ಕುಟುಂಬ ಸದಸ್ಯರಿಗೆ ಸೇರುತ್ತದೆ. ಹಿರಿಯ ಮಗನನ್ನು ಪಕ್ಷದ ಪದಾಧಿಕಾರಿಯನ್ನಾಗಿ ಮಾಡುವಂತೆ ಪಕ್ಷದ ಸಹೋದ್ಯೋಗಿಗಳು ನೀಡಿದ ಸಲಹೆಯನ್ನು ನಯವಾಗಿ ತಿರಸ್ಕರಿಸಿದ್ದೇನೆ ಎಂದು ಹೇಳಿದರು.ನನ್ನ ಮಗ ನನ್ನ ಪಕ್ಕದಲ್ಲಿ ಕುಳಿತುಕೊಳ್ಳಲು ನಾನು ಅನುಮತಿ ನೀಡುವುವುದಿಲ್ಲ’ ಎಂದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!