ಡ್ರೋನ್​ ಪ್ರತಾಪ್ ನಿಂದ ಸೋಡಿಯಂ ಸ್ಫೋಟ: ವರದಿ ಕೇಳಿದ ಮುಖ್ಯಮಂತ್ರಿಗಳ ಕಚೇರಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕೃಷಿ ಹೊಂಡಕ್ಕೆ ಸೋಡಿಯಂ ಎಸೆದು ಸ್ಫೋಟಿಸಿದ್ದ ಘಟನೆಯ ಸಂಪೂರ್ಣ ವರದಿ ನೀಡುವಂತೆ ಮುಖ್ಯಮಂತ್ರಿಗಳ ಕಚೇರಿ (CM Office) ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳಿಗೆ ಸೂಚನೆ ನೀಡಿದೆ.

ಈ ಹಿನ್ನೆಲೆಯಲ್ಲಿ ಮಧುಗಿರಿ ಸಿಪಿಐ ಕಚೇರಿಗೆ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ತೆರಳಿ ಮಾಹಿತಿ ಪಡೆದುಕೊಂಡರು. ಬಳಿಕ, ಅಧಿಕಾರಿಗಳು ಸೋಡಿಯಂ ಸ್ಫೋಟಗೊಂಡ ಜನಕಲೋಟಿ ಬಳಿಯ ಕೃಷಿಹೊಂಡಕ್ಕೆ ತೆರಳಿ ನೀರು ಮತ್ತು ಸ್ಥಳದಲ್ಲಿದ್ದ ಕೆಮಿಕಲ್ ಸ್ಯಾಂಪಲ್ ಸಂಗ್ರಹಿಸಿ ಲ್ಯಾಬ್​ಗೆ ಕಳುಹಿಸಿದ್ದಾರೆ.

ಡ್ರೋನ್​ ಪ್ರತಾಪ್ ಅವರು ಕೆಲ ದಿನಗಳ ಹಿಂದೆ ತುಮಕೂರು ‌ಜಿಲ್ಲೆಯ ಮಧುಗಿರಿ ತಾಲೂಕಿನ ಜನಕಲೋಟಿ ಬಳಿ ಕೃಷಿಹೊಂಡಕ್ಕೆ ಸೋಡಿಯಂ ಎಸೆದು ಸ್ಫೋಟಿಸಿದ್ದರು. ಅನಮತಿ ಇಲ್ಲದೆ ಸ್ಫೋಟಿಸಿದ್ದಾರೆ ಎಂಬ ಆರೋಪದ ಮೇಲೆ ​ಅವರನ್ನು ಕಳೆದ ಗುರುವಾರ (ಡಿಸೆಂಬರ್​ 12) ಮಿಡಿಗೇಶಿ ಪೊಲೀಸರ ಬಂಧಿಸಿದ್ದರು. ಇದೀಗ ನ್ಯಾಯಾಲಯ ಡ್ರೋನ್​ ಪ್ರತಾಪ್​ ಅವರನ್ನು ನ್ಯಾಯಾಂಗ ಬಂಧನಕ್ಕೆ ನೀಡಿದೆ.

ಪ್ರಕರಣ ಸಂಬಂಧ ಡ್ರೋನ್​ ಪ್ರತಾಪ್​ ಅವರ ವಿರುದ್ಧ ಮಿಡಿಗೇಶಿ ಠಾಣೆ ಪೊಲೀಸರು BNS ಸೆಕ್ಷನ್ 288 ಮತ್ತು ಸ್ಫೋಟ ವಸ್ತು ನಿಯಂತ್ರಣ ಕಾಯ್ದೆ 3ರ ಅಡಿ ಪ್ರಕರಣ ದಾಖಲಿಸಿದ್ದಾರೆ.

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!