ಗಾಳಿಯಲ್ಲಿ ಹಾರಿ ಕಟ್ಟಡಕ್ಕೆ ಬಡಿದ ಸೋಫಾ: ಆಕಾಶದಲ್ಲಿ ವಿಚಿತ್ರ ದೃಶ್ಯ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಟರ್ಕಿಯಲ್ಲಿ ಚಂಡಮಾರುತ ಭೀತಿ ಸೃಷ್ಟಿಸಿದೆ. ಭೀಕರ ಗಾಳಿಗೆ ಮರಗಳು, ಕಟ್ಟಡಗಳ ಛಾವಣಿಗಳು ಮತ್ತು ಕಿಟಕಿಗಳು ಹಾರಿಹೋಗಿವೆ. ಗಾಳಿಯಲ್ಲಿ ಹಾರುತ್ತಿದ್ದ ಸೋಫಾ ಎಲ್ಲರನ್ನೂ ಅಚ್ಚರಿಗೊಳಿಸಿತು.

ಸೋಫಾ ಗಾಳಿಯಲ್ಲಿ ಹಾರುತ್ತಿರುವ ವಿಡಿಯೋವೊಂದು ಅಂತರ್ಜಾಲದಲ್ಲಿ ವೈರಲ್ ಆಗಿದೆ. ಇದನ್ನು ನೋಡಿದ ಜನರು ಅಚ್ಚರಿಗೊಂಡಿದ್ದಾರೆ. ಇದು ಟರ್ಕಿಯ ಅಂಕಾರಾದಲ್ಲಿ ಚಂಡಮಾರುತದ ಸಮಯದಲ್ಲಿ ತೆಗೆದ ವೀಡಿಯೊ. ನಗರದಲ್ಲಿ ಬೀಸಿದ ಗಾಳಿಯಿಂದಾಗಿ ಬಹುಮಹಡಿ ಕಟ್ಟಡದ ಮೇಲಿದ್ದ ಸೋಫಾ ಗಾಳಿಯಲ್ಲಿ ಹಾರಿ ಕಟ್ಟಡಕ್ಕೆ ಅಪ್ಪಳಿಸಿದೆ. ಆದರೆ ಅದೃಷ್ಟವಶಾತ್ ಈ ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ.

ಗಂಟೆಗೆ 45 ಕಿಲೋಮೀಟರ್ ವೇಗದ ಗಾಳಿಯು ಅಂಕಾರಾದಲ್ಲಿ ತೀವ್ರ ಹಾನಿಯನ್ನುಂಟುಮಾಡಿದೆ. ಅಂಕಾರಾ ಮೆಟ್ರೋಪಾಲಿಟನ್ ಪುರಸಭೆಯ ಮೇಯರ್ ಮನ್ಸೂರ್ ಅಲ್ಲಿನ ಪರಿಸ್ಥಿತಿಯ ಬಗ್ಗೆ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆಗಳನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಅಲ್ಲಿನ ಜನರ ಅನುಭವಗಳನ್ನೂ ಸಾಮಾಜಿಕ ಜಾಲತಾಣಗಳಲ್ಲಿ ತಿಳಿದುಕೊಂಡರು. ಚಂಡಮಾರುತದ ನಂತರದ ವಿನಾಶದ ಫೋಟೋಗಳು ಮತ್ತು ವೀಡಿಯೊಗಳನ್ನು ಪೋಸ್ಟ್ ಮಾಡಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!