ಹೊಸದಿಗಂತ ಡಿಜಿಟಲ್ ಡೆಸ್ಕ್:
ನನ್ನ ಜೀವನದಲ್ಲಿ ಎಲ್ಲ ಧರ್ಮದ ಬಗ್ಗೆ ನಾನು ಗೌರವ ಇಟ್ಟಿದ್ದೇನೆ. ಹಿಂದು ಆಗಿ ಹುಟ್ಟಿದ್ದೇನೆ, ಹಿಂದು ಆಗಿ ಸಾಯುತ್ತೇನೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ಕುಂಭಮೇಳದಲ್ಲಿ ನಾನು ಭಾಗಿಯಾಗಿರೋದು ಕೆಲವರಿಗೆ ಅಸಮಾಧಾನ ಆಗಿದೆ. ನಾನು ಹಿಂದು. ಕುಂಭಮೇಳ ನನಗೆ ಉತ್ತಮ ಅನುಭವ ನೀಡಿದೆ. ಅಲ್ಲಿ ತುಂಬಾ ಚನ್ನಾಗಿ ನಿರ್ವಹಣೆ ಮಾಡಿದ್ದಾರೆ. ಜೈಲಿನಲ್ಲಿ ಇದ್ದಾಗ ಸಿಖ್ ಧರ್ಮದ ಬಗ್ಗೆ ಅಧ್ಯಯನ ಮಾಡಿದ್ದೆ. ಇಸ್ಲಾಂ ಧರ್ಮದ ದರ್ಗಾಗೆ ಹಾಗೂ ಚರ್ಚ್‌ಗೂ ಹೋಗುತ್ತೇನೆ ಎಂದರು.
ಇಶಾ ಫೌಂಡೇಶನ್ ಸಂಸ್ಥೆಯವರು ನಮ್ಮ ಮನೆಗೆ ಬಂದು ಆಹ್ವಾನ ನೀಡಿದ್ದಾರೆ. ಇದಕ್ಕೆ ಕೆಲವರು ಸಾಮಾಜಿಕ ಜಾಲತಾಣದಲ್ಲಿ ವಿರೋಧ ವ್ಯಕ್ತಪಡಿಸಿದ್ದಾರೆ. ನಾನು ಇಶಾ ಫೌಂಡೇಶನ್ ಕಾರ್ಯಕ್ರಮಕ್ಕೆ ಹೋಗುತ್ತಿದ್ದೇನೆ. ಕಳೆದ ಬಾರಿ ನನ್ನ ಮಗಳು ಹೋಗಿದ್ದಳಂತೆ. ಈ ಬಾರಿ ನಾನು ಹೋಗುತ್ತಿದ್ದೇನೆ ಎಂದರು.