Friday, June 9, 2023

Latest Posts

ನಿಮ್ಮ 60 ರೂಪಾಯಿ ಸೀರೆ ಯಾರಿಗ್ ಬೇಕು, ಶಾಮನೂರು ಶಿವಶಂಕರಪ್ಪ ಕೊಟ್ಟ ಸೀರೆಗಳಿಗೆ ಬೆಂಕಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಚುನಾವಣೆ ದಿನಾಂಕ ಘೋಷಣೆಯಾಗುತ್ತಿದ್ದಂತೆಯೇ ರಾಜಕೀಯ ನಾಯಕರು ಆಕ್ಟೀವ್ ಆಗಿದ್ದಾರೆ, ಅಲ್ಪಸಮಯದಲ್ಲಿ ಜನರ ಮನ ಗೆಲ್ಲಲು ತಯಾರಿ ನಡೆಸಿದ್ದಾರೆ.

ಗಿಫ್ಟ್ ನೀಡಿ ಮತಗೆಲ್ಲುವ ಭರದಲ್ಲಿ ಚೀಪ್ ಕ್ವಾಲಿಟಿ ಸೀರೆಗಳನ್ನು ಕಾಂಗ್ರೆಸ್ ಶಾಸಕ ಶಾಮನೂರು ಶಿವಶಂಕರಪ್ಪ ನೀಡಿದ್ದು, ಮಹಿಳಾಮಣಿಗಳ ಆಕ್ರೋಶಕ್ಕೆ ಕಾರಣವಾಗಿದೆ. ನಿಮ್ಮ 60 ರೂಪಾಯಿ ಸೀರೆ ಉಟ್ಟುಕೊಳ್ಳುವಷ್ಟು ನಿರ್ಗತಿಕರಲ್ಲ ಎಂದು ನಾರಿಯರು ಸೀರೆಗಳಿಗೆ ಬೆಂಕಿ ಇಟ್ಟಿದ್ದಾರೆ.

ದಾವಣಗೆರೆ ದಕ್ಷಿಣ ಕ್ಷೇತ್ರದ ಮಹಿಳೆಯರಿಗೆ ಸೀರೆಗಳನ್ನು ಹಂಚಲಾಗಿತ್ತು. ಕೆಲವರು ಸೀರೆ ತೆಗೆದುಕೊಂಡು ಸುಮ್ಮನಾಗಿದ್ದಾರೆ ಆದರೆ ಹಲವರು ನಾವು ನೀವಂದುಕೊಂಡಷ್ಟು ನಿರ್ಗತಿಕರಲ್ಲ ಎಂದು ರಸ್ತೆಯಲ್ಲೇ ಸೀರೆ ಬ್ಯಾಗ್‌ಗಳಿಗೆ ಬೆಂಕಿ ಇಟ್ಟು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!