ಸೂರ್ಯನ ಹೊರಮೈನಲ್ಲಿ ಪ್ರಬಲ ಸ್ಫೋಟ; ಮುಂದೇನಾಗಲಿದೆ..?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ 
ನಮ್ಮ ಸೌರವ್ಯೂಹದ ದೊಡ್ಡ ನಕ್ಷತ್ರವಾಗಿರುವ ಸೂರ್ಯನ ಈಶಾನ್ಯ ಭಾಗದಲ್ಲಿ ಪ್ರಬಲ ಸ್ಫೋಟ ಸಂಭವಿಸಿದೆ. ಜೂನ್.31‌ ರಂದು ಸೂರ್ಯನು ತನ್ನ ಸೌರ ಚಕ್ರದ ಮೇಲ್ಭಾಗವನ್ನು ಸಮೀಪಿಸುತ್ತಿರುವಾಗ ಸ್ಪೋಟ ಸಂಭವಿಸಿರುವುದು ಭೂಮಿಯ ಸೌರ ವೀಕ್ಷಣಾಲಯಗಳಿಗೆ ಸ್ಪಷ್ಟವಾಗಿ ಗೋಚರಿಸಿದೆ.
ಸೂರ್ಯನ ಒಡಲಿನಿಂದ ಭಾರೀ ಗಾತ್ರದ ಸೌರ ಜ್ವಾಲೆಗಳು ಎದ್ದಿರುವುದನ್ನು ʼಯೂನಿವರ್ಸೆಲ್‌ ಟೈಮ್‌ ಕೋ ಆರ್ಡಿನೇಷನ್‌ʼ ಪತ್ತೆಹಚ್ಚಿದೆ. ಈ ಸ್ಫೋಟಕ್ಕೆ C9.3 ಜ್ವಾಲೆ ಎಂದು ಹೆಸರಿಸಲಾಗಿದ್ದು, ಸೌರ ಚಟುವಟಿಕೆಯನ್ನು ಮೇಲ್ವಿಚಾರಣೆ ಮಾಡುವ ನಾಸಾದ `ಸೋಲಾರ್ ಡೈನಮಿಕ್ಸ್ ಅಬ್ಸರ್ವೇಟರಿ’ (SDO) ಈ ಚಿತ್ರವನ್ನು ಸೆರೆಹಿಡಿದಿದೆ.

ಸ್ಫೋಟಕ್ಕೆ ನಿಖರ ಕಾರಣವೇನು ಎಂಬುದೂ ಇನ್ನೂ ತಿಳಿದುಬಂದಿಲ್ಲ. ಆದರೆ, ಈ ಸ್ಫೋಟದಿಂದ ಭೂಮಿಗೆ ಅಪಾಯವಿಲ್ಲ ಎನ್ನಲಾಗಿದೆ. ಸ್ಫೋಟದ ಒಂದು ವಾರದ ಬಳಿಕ ಸಣ್ಣ ಪ್ರಮಾಣದ G-1 ವರ್ಗದ ಭೂಕಾಂತೀಯ ಚಂಡಮಾರುತವು ಭೂಮಿಯನ್ನು ತಲುಪಬಹುದು. ಅದರ ವಾತಾವರಣದಲ್ಲಿ ಹೆಚ್ಚಿನ ಬದಲಾವಣೆ ಮಾಡಲಾರದು ಎಂಬ ಮಾಹಿತಿಯಿದೆ.
ಸೂರ್ಯನಲ್ಲಿ ಕಳೆದ 11 ವರ್ಷಗಳಲ್ಲಿ ಈ ಮಾದರಿಯ ಸೌರ ಸ್ಫೋಟಗಳು ಹೆಚ್ಚಾಗಿ ಸಂಭವಿಸುತ್ತಿವೆ. ಸೌರ ಸ್ಫೋಟಗಳ ಸಂಭಾವ್ಯ ಪರಿಣಾಮಗಳು ಸ್ಫೋಟಗಳ ಗಾತ್ರ ಮತ್ತು ಪಥವನ್ನು ಅವಲಂಬಿಸಿರುತ್ತದೆ. ದೊಡ್ಡ ಪ್ರಮಾಣದಲ್ಲಿ ಸ್ಫೋಟ ಸಂಭವಿಸಿದರೆ ಭೂಮಿಯಲ್ಲಿ ಬಿರುಗಾಳಿಗಳಿಗೆ ಕಾರಣವಾಗಬಹುದು, ಸಂವಹನ ವ್ಯವಸ್ಥೆ, ವಿದ್ಯುತ್ ವ್ಯವಸ್ಥೆಗಳಿಗೆ ಅಡ್ಡಿಯಾಗಬಹುದು. ಈ ಚಂಡಮಾರುತಗಳ ಪರಿಣಾಮವಾಗಿ ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ ಮತ್ತು ಕಕ್ಷೆಯಲ್ಲಿರುವ ಉಪಗ್ರಹಗಳು ವಿಕಿರಣ ಹಾನಿಯನ್ನು ಸಹ ಹೊಂದಿರಬಹುದು’ ಎಂದು ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!