ಹೊಸದಿಗಂತ ವರದಿ ಹುಬ್ಬಳ್ಳಿ:
ಕುಡಿಯುವ ಬಿಟ್ಟು ದುಡಿಮೆ ಮಾಡು ಎಂದು ಹೇಳಿದ ತಂದೆ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಿದ್ದ ಆರೋಪಿಗಳಾದ ಮಗ ಹಾಗೂ ಸೊಸೆಯನ್ನು ಹಳೇ ಪೊಲೀಸರು ಬಂಧಿಸಿದ್ದಾರೆ.
ಅಪ್ಪಣ್ಣ ಮೈಸೂರ ಹಾಗೂ ಲಕ್ಷ್ಮೀ ಎಂಬ ಆರೋಪಿಗಳನ್ನು ಬಂಧಿಸಿದ್ದಾರೆ. ಇತ್ತೀಚೆಗೆ ಹಳೇ ಹುಬ್ಬಳ್ಳಿ ಸಂತೋಷ ನಗರದಲ್ಲಿ ತಂದೆ ನಾಗರಾಜ ಮಗ ಅಣ್ಣಪ್ಪನಿಗೆ ಬುದ್ದಿವಾದ ಹೇಳಿದ್ದ. ಈ ಸಂದರ್ಭದಲ್ಲಿ ಕೋಪಗೊಂಡ ಮಗ ಹಾಗೂ ಸೊಸೆ ಅವನ ಮೇಲೆ ಚಂಬಿನಿಂದ ಹಲ್ಲೆ ನಡೆಸಿದ್ದರು. ಗಂಭೀರವಾಗಿ ಗಾಯಗೊಂಡ ಆತನ ಕೆಎಂಸಿಆರ್ ಆಸ್ಪತ್ರೆ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದ. ಆಗ ಆರೋಪಿಗಳಿಬ್ಬರು ಪರಾರಿಯಾಗಿದ್ದರು. ಸದ್ಯ ಹಳೇ ಹುಬ್ಬಳ್ಳಿ ಪೊಲೀಸ್ ಅಧಿಕಾರಿ ಎಚ್. ಎಸ್. ಹಳ್ಳೂರ ನೇತೃತ್ವದ ತಂಡ ಅವರನ್ನು ಬಂಧಿಸಿ, ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ.