August 26, 2026
Wednesday, August 26, 2026
spot_img

ಹೊಟ್ಟೆ ನೋವು ತಾಳಲಾರದೇ ಆತ್ಮಹತ್ಯೆಗೆ ಶರಣಾದ ಮಗ: ಸಾವಿನ ಸುದ್ದಿ ಕೇಳಿ ಪ್ರಾಣಬಿಟ್ಟ ತಾಯಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಮಗನ ಸಾವಿನ ಸುದ್ದಿ ಕೇಳಿ ತಾಯಿಯೂ ಮೃತಪಟ್ಟಿರುವ ದಾರುಣ ಘಟನೆ ಧಾರವಾಡದಲ್ಲಿ ನಡೆದಿದೆ.

ತೇಜಸ್ವಿನಗರದ ನಿವಾಸಿ ಮೆಹಬೂಬ್‌ ಸಾಬ್‌ ನದಾಫ್‌ ಹೊಟ್ಟೆ ನೋವಿನಿಂದ ಬಳಲುತ್ತಿದ್ದರು. ಎಷ್ಟು ಪ್ರಯತ್ನಿಸಿದರೂ ಹೊಟ್ಟೆ ನೋವು ಹೋಗದ ಕಾರಣ ರೈಲು ಹಳಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದರು. ರೈಲ್ವೆ ಪೊಲೀಸರು ಸಂಜೆ ಮೆಹಬೂಬ್ ಶವ ಮರಣೋತ್ತರ ಪರೀಕ್ಷೆ ಮುಗಿಸಿ ಕೊಟ್ಟಿದ್ದರು.

ಮಗನ ಅಂತ್ಯಸಂಸ್ಕಾರಕ್ಕೆ ತಯಾರಿ ನಡೆದಿತ್ತು. ಮನೆಯಿಂದ ಮಗನ ಮೃತದೇಹವನ್ನು ತೆಗೆದುಕೊಂಡು ಹೋದ ಕೆಲವೇ ಕ್ಷಣದಲ್ಲಿ ತಾಯಿ ಮುಗುಟಬಿ ನದಾಫ್‌ ಕೂಡ ಮೃತಪಟ್ಟಿದ್ದಾರೆ. ಮೆಹಬೂಬ್‌ ಅಂತ್ಯಕ್ರಿಯೆಗೆ ಬಂದಿದ್ದ ಜನರು ಮುಗುಟಬಿ ಅವರ ಅಂತ್ಯಕ್ರಿಯೆನ್ನೂ ನಡೆಸಿ ಊರಿನಿಂದ ಹೊರಟಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !