ಹೊಸದಿಗಂತ ಡಿಜಿಟಲ್ ಡೆಸ್ಕ್:
ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ರಾಜೀನಾಮೆ ಬೆನ್ನಲ್ಲೇ ಮುಂದಿನ ಪ್ರಧಾನಿ ಯಾರೆಂಬ ಕುತೂಹಲ ಹೆಚ್ಚಿದ್ದು, ಇದೀಗ ಬ್ರಿಟನ್‌ನ ಮಾಜಿ ಹಣಕಾಸು ಸಚಿವ, ಇನ್ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ ಅಳಿಯ ರಿಷಿ ಸುನಕ್ ಅವರು ರ ಬ್ರಿಟನ್‌ನ ಮುಂದಿನ ಪ್ರಧಾನಿಯಾಗಿ ಸ್ಪರ್ಧಿಸುತ್ತೇನೆ ಘೋಷಿಸಿದ್ದಾರೆ.
ವಿಡಿಯೋ ಸಂದೇಶ ನೀಡಿರುವ ರಿಷಿ ಸುನಕ್, ತಾನು ಪ್ರಧಾನಿಯಾಗಲು ಸೂಕ್ತ ಅಭ್ಯರ್ಥಿ ಎಂದಿದ್ದಾರೆ. ಇಷ್ಟೇ ಅಲ್ಲ ಪ್ರಧಾನಿಯಾದ ಬಳಿಕ ಮುಂದಿರುವ ಸವಾಲುಗಳನ್ನು ಎದುರಿಸುವ ರೂಪುರೇಶೆಯನ್ನು ತೆರೆದಿಟ್ಟಿದ್ದಾರೆ. ವಿಶೇಷ ಅಂದರೆ ರಿಷಿ ವಿಡಿಯೋದಲ್ಲಿ ತಮ್ಮ ಕುಟುಂಬದ ಕುರಿತು ಹೇಳಿದ್ದಾರೆ. ಪೋಷಕರು, ಕುಟುಂಬ, ದೇಶ ಪ್ರೇಮ, ಆರ್ಥಿಕತೆ ಕುರಿತು ಮಾತನಾಡಿದ್ದಾರೆ.
ಹೊಸ ಬ್ರಿಟನ್ ಕಟ್ಟಬೇಕಿದೆ. ಹೊಸ ಆರ್ಥಿಕತೆ ಬೇಕಿದೆ ಎಂದಿದ್ದಾರೆ. ತಮ್ಮ ತಾಯಿ ಬ್ರಿಟನ್‌ಗೆ ಆಗಮಿಸಿದ ಕತೆಯಿಂದ ಹಿಡಿದು ಇದೀಗ ಪ್ರಧಾನಿಯಾಗುವ ವರೆಗಿನ ಕತೆಯನ್ನು ಪುಟ್ಟದಾಗಿ ಚೊಕ್ಕವಾಗಿ ರಿಷಿ ಹೇಳಿದ್ದಾರೆ. ಇಲ್ಲಿವರೆಗೆ ನನ್ನ ಕತೆ ಹೇಳಿದರೆ, ಮುಂದಿ ನಿಮ್ಮ ಕತೆ, ಈ ದೇಶದ ಕತೆಯನ್ನು ಮತ್ತಷ್ಟು ಸುಂದರವಾಗಿಸಬೇಕಿದೆ ಎಂದು ಹೊಸ ಭರವಸೆ ತುಂಬಿದ್ದಾರೆ.
I’m standing to be the next leader of the Conservative Party and your Prime Minister.
Let’s restore trust, rebuild the economy and reunite the country. #Ready4Rishi
Sign up 👉 https://t.co/KKucZTV7N1 pic.twitter.com/LldqjLRSgF
— Ready For Rishi (@RishiSunak) July 8, 2022
ಆಡಳಿತಾರೂಢ ಕನ್ಸರ್ವೇಟಿವ್ ಪಕ್ಷದಲ್ಲಿ ಮುಂದಿನ ಪ್ರಧಾನಿಗೆ ತುರುಸಿನ ಸ್ಪರ್ಧೆ ಏರ್ಪಟ್ಟಿದೆ. ಕನ್ಸರ್ವೇಟಿವ್ ಪಕ್ಷದ 716 ಸದಸ್ಯರ ಸಮೀಕ್ಷೆಯಲ್ಲಿ ರಕ್ಷಣಾ ಸಚಿವ ಬೆನ್ ವ್ಯಾಲೇಸ್ ಮುಂಚೂಣಿಯಲ್ಲಿದ್ದಾರೆ ಎಂದು ‘ಮೈ ಗವ್’ ಸಮೀಕ್ಷೆ ಹೇಳಿದೆ. ಈನ್ನೂ ಕೆಲವು ಮಾಧ್ಯಮಗಳು ಗೋವಾ ಮೂಲದ ರಾಜಕಾರಣಿ, ಬ್ರಿಟನ್‌ನ ಹಾಲಿ ಅಟಾರ್ನಿ ಜನರಲ್ ಸುಯೆಲ್ಲಾ ಬ್ರೇವರ್‌ಮ್ಯಾನ್ ಮುಂಚೂಣಿಯಲ್ಲಿದ್ದಾರೆ ಎಂದು ಹೇಳಿವೆ. ಪ್ರೀತಿ ಪಟೇಲ್, ಪೆನ್ನಿ ಮೊರ್ಡುವಾಂಟ್, ಸ್ಟೀವ್ ಬೇಕರ್, ಸಾಜಿದ್ ಜಾವಿದ್ ಹೆಸರು ಕೂಡ ಚಾಲ್ತಿಯಲ್ಲಿದೆ.
ಕನ್ಸರ್ವೇಟಿವ್ ಪಕ್ಷ ಆಂತರಿಕ ಚುನಾವಣೆ ನಡೆಸಿ ಮುಂದಿನ ಪ್ರಧಾನಿಯನ್ನು ಆಯ್ಕೆ ಮಾಡಬೇಕಾಗುತ್ತದೆ. ಈ ಆಂತರಿಕ ಚುನಾವಣೆ ತಕ್ಷಣವೇ ಏರ್ಪಡದು. ಅಕ್ಟೋಬರ್‌ನಲ್ಲಿ ನಡೆಯಬಹುದು ಎಂದು ವರದಿಗಳು ಹೇಳಿವೆ. ಅಲ್ಲಿವರೆಗೂ ಬೋರಿಸ್ ಜಾನ್ಸನ್ ಅವರು ಹಂಗಾಮಿ ಪ್ರಧಾನಿಯಾಗಿ ಮುಂದುವರಿಯಲಿದ್ದಾರೆ.