ಹೊಸದಿಗಂತ ವರದಿ ಚಿತ್ರದುರ್ಗ:
ಜನ್ಮ ಕೊಟ್ಟ ತಂದೆಯನ್ನೇ ಮಗ ಹತ್ಯೆ ಮಾಡಿರುವ ಘಟನೆ ಚಿತ್ರದುರ್ಗದಲ್ಲಿ ನಡೆದಿದೆ. ಚಳ್ಳಕೆರೆ ತಾಲೂಕಿನ ವರವು ಕಾವಲು ಬಳಿ ಈ ಪೈಶಾಚಿಕ ಕೃತ್ಯ ನಡೆದಿದ್ದು, ಬತ್ತಯ್ಯನ ಹಟ್ಟಿ ನಿವಾಸಿ ಸೂರಯ್ಯ ಕೊಲೆಯಾದ ದುರ್ದೈವಿ.
ರಾತ್ರಿ ಕುಡಿದ ಮತ್ತಿನಲ್ಲಿ ಸೂರಯ್ಯ ಹಾಗೂ ಮಗ ಮೋಹನ್ ನಡುವೆ ಜಗಳ ನಡೆದಿತ್ತು. ಅದೇ ಕೋಪಕ್ಕೆ ಬೆಳಗಿನ ಜಾವ ಸೂರಯ್ಯನ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಮೋಹನ್ ಹತ್ಯೆ ಮಾಡಿದ್ದಾನೆ. ಹತ್ಯೆ ಬಳಿಕ ಚಳ್ಳಕೆರೆ ಠಾಣೆಗೆ ಬಂದು ಆರೋಪಿ ಶರಣಾಗಿದ್ದು, ಸ್ಥಳಕ್ಕೆ CPI ಸಮೀವುಲ್ಲಾ ಭೇಟಿ ಕೊಟ್ಟು ಪರಿಶೀಲನೆ ನಡೆಸಿದರು. ನಾಯಕನಹಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.