ಹರಿಯಾಣಿ ಹಾಡುಗಳಿಗೆ ಕುಣಿದು ಸಂಭ್ರಮಿಸಿದ ಸೋನಿಯಾ ಗಾಂಧಿ, ಪ್ರಿಯಾಂಕಾ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಹರಿಯಾಣದ ಸೋನೆಪತ್‌ನ ಕೆಲವು ಮಹಿಳೆಯರು ಕಾಂಗ್ರೆಸ್‌ ಅಧಿನಾಯಕಿ ಸೋನಿಯಾ ಗಾಂಧಿ ಮತ್ತು ಅವರ ಪುತ್ರಿ ಪ್ರಿಯಾಂಕಾ ಗಾಂಧಿ ಅವರೊಂದಿಗೆ ಹರಿಯಾಣಿ ಹಾಡುಗಳಿಗೆ ನೃತ್ಯ ಮಾಡಿದ್ದಾರೆ.

ಈ ಕುರಿತ ವಿಶೇಷ ವಿಡಿಯೋವನ್ನುಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಭಾನುವಾರ ಹಂಚಿಕೊಂಡಿದ್ದಾರೆ. ಸುಮಾರು 12 ನಿಮಿಷಗಳ ವಿಡಿಯೋ ಇದಾಗಿದೆ .

ಸೋನೆಪತ್‌ನಿಂದ ಕೆಲವು ಮಹಿಳೆಯರನ್ನು ದೆಹಲಿಗೆ ಆಹ್ವಾನಿಸಲಾಗಿದೆ. ಈ ವೇಳೆ ಸೋನಿಯಾ ಗಾಂಧಿ, ಪ್ರಿಯಾಂಕಾ ಗಾಂಧಿ ಹಾಗೂ ರಾಹುಲ್‌ ಗಾಂಧಿ ಅವರೊಂದಿಗೆ ಭೇಟಿ ಮಾಡಿಸಿ ಮಾತುಕತೆ ನಡೆಸಿದರು.

ದೆಹಲಿ ಹೇಗಿದೆ? ನೀವೆಲ್ಲೂ ಸುತ್ತಾಡೋಕೆ ಹೋಗಿಲ್ಲವೇ? ರಾಹುಲ್ ಪ್ರಶ್ನಿಸಿದರು. ಅದಾದ ಬಳಿಕ ಸೋನಿಯಾ, ಪ್ರಿಯಾಂಕಾ ಹಾಗೂ ರಾಹುಲ್‌ ಅವರೊಂದಿಗೆ ಭೋಜನ ಕೂಟದಲ್ಲೂ ಭಾಗಿಯಾಗಿದ್ದರು.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!