ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಂಗಳವಾರ ಕೇಂದ್ರ ಬಿಜೆಪಿ ಸರಕಾರ ಲೋಕಸಭೆಯಲ್ಲಿ ಮಹಿಳಾ ಮೀಸಲಾತಿ ಮಸೂದೆಯನ್ನು ಮಂಡಿಸಿತು. ಇಂದು ಈ ಮಸೂದೆ ಕುರಿತು ಚರ್ಚೆ ನಡೆಯುತ್ತಿದ್ದು, ಕಾಂಗ್ರೆಸ್ ಪಕ್ಷ ಸೋನಿಯಾ ಗಾಂಧಿ ನೇತೃತ್ವದಲ್ಲಿ ಚರ್ಚೆಗಿಳಿದಿದೆ. ಈ ಕುರಿತು ಲೋಕಸಭೆಯಲ್ಲಿ ಮಾತನಾಡಿದ ಸೋನಿಯಾ ಗಾಂಧಿ, ʻಇದು ನನ್ನ ಸ್ವಂತ ಜೀವನದ ಭಾವನಾತ್ಮಕ ಕ್ಷಣ ಎಂದರುʼ.
ಮೊದಲ ಬಾರಿಗೆ, ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಮಹಿಳಾ ಪ್ರಾತಿನಿಧ್ಯವನ್ನು ನಿರ್ಧರಿಸಲು ಸಾಂವಿಧಾನಿಕ ತಿದ್ದುಪಡಿಯನ್ನು ತಂದವರು ನನ್ನ ಜೀವನ ಸಂಗಾತಿ ರಾಜೀವ್ ಗಾಂಧಿ. ಆದರೆ, ಈ ಮಸೂದೆ ರಾಜ್ಯಸಭೆಯಲ್ಲಿ ಏಳು ಕಡಿಮೆ ಮತಗಳಿಂದ ಸೋಲನ್ನು ಕಂಡಿತು. ನಂತರ ಪಿಎಂ ಪಿ.ವಿ.ನರಸಿಂಹರಾವ್ ನೇತೃತ್ವದ ಕಾಂಗ್ರೆಸ್ ಸರ್ಕಾರ ರಾಜ್ಯಸಭೆಯಲ್ಲಿ ಅಂಗೀಕಾರವಾಯಿತು. ಇದರ ಪರಿಣಾಮವಾಗಿ ದೇಶಾದ್ಯಂತ 15 ಲಕ್ಷ ಮಹಿಳಾ ನಾಯಕರನ್ನು ಸ್ಥಳೀಯ ಸಂಸ್ಥೆಗಳ ಮೂಲಕ ಆಯ್ಕೆ ಮಾಡಿದ್ದೇವೆ. ರಾಜೀವ್ ಗಾಂಧಿಯವರ ಕನಸು ಭಾಗಶಃ ಮಾತ್ರ ಪೂರ್ಣಗೊಂಡಿದೆ. ಈ ಮಸೂದೆಯ ಅಂಗೀಕಾರದೊಂದಿಗೆ ಅದೂ ಪೂರ್ಣಗೊಳ್ಳುತ್ತದೆ ಎಂದರು.
ಕಾಂಗ್ರೆಸ್ ಪಕ್ಷ ಈ ಮಸೂದೆಗೆ ಸಂಪೂರ್ಣ ಬೆಂಬಲ ಘೋಷಿಸುವುದಾಗಿ ಸೋನಿಯಾ ಗಾಂಧಿ ತಿಳಿಸಿದರು. ಮಸೂದೆ ಅಂಗೀಕಾರ ಮಾಡುವ ಬಗ್ಗೆ ನಮಗೆ ಸಂತೋಷವಾಗಿದೆ ಎಂದರು.