Monday, March 4, 2024

ಮಗನ ಕೊಲೆ ಪ್ರಕರಣ: ಆರೋಪಿ ಸುಚನ ಸೇಠ್ ಕಸ್ಟಡಿ ಅವಧಿ ವಿಸ್ತರಣೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ನಾಲ್ಕು ವರ್ಷದ ಮಗನನ್ನು ಕೊಂದು ಬಂಧನಕ್ಕೀಡಾಗಿರುವ ಆರೋಪಿ ತಾಯಿ ಸುಚನ ಸೇಠ್ ಅವರ ಬಂಧನ ಅವಧಿಯನ್ನು ಗೋವಾ ಕೋರ್ಟ್ ವಿಸ್ತರಿಸಿದೆ.

ಸ್ಟಾರ್ಟಪ್ ಸಿಇಒ ಸುಚನಾ ಸೇಠ್ ಅವರ ಪೊಲೀಸ್ ಕಸ್ಟಡಿಯನ್ನು ಗೋವಾ ನ್ಯಾಯಾಲಯವು ಸೋಮವಾರ ಮತ್ತೆ ಐದು ದಿನಗಳವರೆಗೆ ವಿಸ್ತರಿಸಿದೆ. ಆರು ದಿನಗಳ ಆರಂಭಿಕ ಬಂಧನ ಅವಧಿ ಮುಗಿದ ನಂತರ ಸೇಠ್ ಅವರನ್ನು ಇಂದು ಗೋವಾ ಮಕ್ಕಳ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು.

ಕಲಾಂಗುಟೆ ಪೊಲೀಸರು ಆಕೆಯ ಕಸ್ಟಡಿಯನ್ನು ವಿಸ್ತರಿಸುವಂತೆ ಕೋರಿದ್ದು, ತನಿಖೆ ಇನ್ನೂ ಮುಕ್ತಾಯವಾಗಬೇಕಿದೆ. ಸುಚನಾ ಸೇಠ್ (39 ವರ್ಷ) ಜನವರಿ 8 ರಂದು ತನ್ನ ಮಗನ ಶವವನ್ನು ಬ್ಯಾಗ್ನಲ್ಲಿ ತುಂಬಿ ಗೋವಾಕ್ಕೆ ತರುವಾಗ ಟ್ಯಾಕ್ಸಿಯಲ್ಲಿ ಪ್ರಯಾಣಿಸುತ್ತಿದ್ದಾಗ ಕರ್ನಾಟಕದ ಚಿತ್ರದುರ್ಗದಲ್ಲಿ ಬಂಧಿಸಲಾಗಿತ್ತು.

ಈ ಪ್ರಕರಣದ ವಿಚಾರಣೆ ಇಂದು ಗೋವಾದ ಮಾಪುಸಾ ಪಟ್ಟಣದ ನ್ಯಾಯಾಲಯ ನಡೆದಿದ್ದು, ಆರೋಪಿ ತಾಯಿ ಸುಚನ ಸೇಠ್ ರನ್ನು ಮತ್ತೆ ಐದು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!