ಜೈಲಿನಿಂದ ಬಿಡುಗಡೆ ಬೆನ್ನಲ್ಲೇ ಸೋನು ಗೌಡ ನಯಾ ರೀಲ್ಸ್! ಒಳ್ಳೆಯ ಟೈಮ್ ಬರುತ್ತೆ ಅಂದ್ರು ಫ್ಯಾನ್ಸ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸೋನು ಶ್ರೀನಿವಾಸ ಗೌಡ ಯಾರಿಗೇ ತಾನೇ ಗೊತ್ತಿಲ್ಲ ಹೇಳಿ. ಸೋಷಿಯಲ್ ಮೀಡಿಯಾದಲ್ಲಿ ಜನಪ್ರಿಯರಾಗಿದ್ದ ಕಾರಣಕ್ಕೆನೇ ಸೋನು ಗೌಡಗೆ ಓಟಿಟಿ ಬಿಗ್‌ಬಾಸ್ ಅವಕಾಶ ಸಿಕ್ಕಿದ್ದು.

ಆದರೆ ಕಳೆದ ವಾರವಷ್ಟೇ ಅಕ್ರಮವಾಗಿ ಮಗು ದತ್ತು ಪಡೆದ ಆರೋಪದಲ್ಲಿ ರೀಲ್ಸ್ ಸ್ಟಾರ್, ಸೋನು ಗೌಡ ಅವರು ಜೈಲುವಾಸ ಅನುಭವಿಸಿ ಬಂದಿದ್ದಾರೆ.

ಇದೀಗ ಪರಪ್ಪನ ಅಗ್ರಹಾರ ಜೈಲಿನಿಂದ ಜಾಮೀನು ಪಡೆದು ಸೋನು ಗೌಡ ಹೊಸ ರೀಲ್ಸ್ ಮಾಡಿದ್ದಾರೆ. ಯುಗಾದಿ ಹಬ್ಬದಂದು ಸೋನು ಗೌಡ ಸೀರೆಯಲ್ಲಿ ಕ್ಯಾಮೆರಾಗೆ ಪೋಸ್ ನೀಡಿದ್ದಾರೆ.

ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು. ವಿಡಿಯೋ ನೋಡಿದ ಕೆಲವರು ಕಾಮೆಂಟ್ ಮಾಡಿದ್ದಾರೆ. ಒಳ್ಳೆಯ ಸಮಯ ಬರುತ್ತದೆ, ಅಲ್ಲಿಯವರೆಗೂ ತಾಳ್ಮೆ ಇರಲಿ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನು ಹಲವರು ನೀವಿಲ್ಲದೇ ಇನ್​ಸ್ಟಾಗ್ರಾಮ್​ ನೋಡುವುದಕ್ಕೆ ಬೇಸರ ಆಗುತ್ತಿತ್ತು ಎಂದು ಕಾಮೆಂಟ್ ಮಾಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!