ಜೈಲಿಗೆ ಹೋಗಿ ಬಂದಿದ್ದು ಒಳ್ಳೆದಾಯ್ತು, ಅನುಭವ ಕೆಟ್ಟದಾಗಿದ್ರೂ ಪಾಠ ಕಲಿತೆ ಎಂದ ಸೋನು ಗೌಡ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಸಾಮಾಜಿಕ ಜಾಲತಾಣದಲ್ಲಿ ಫೇಮಸ್‌ ಆಗಿರುವ ಸೋನು ಗೌಡ ಇದೀಗ ಜಾಮೀನಿನ ಮೇಲೆ ಜೈಲಿನಿಂದ ಬಿಡುಗಡೆಯಾಗಿದ್ದಾರೆ.

ಅನಧಿಕೃತವಾಗಿ ಮಗುವನ್ನು ದತ್ತು ಪಡೆದಿರುವ ಆರೋಪದ ಮೇಲೆ ಸೋನು ಗೌಡರನ್ನು ಅರೆಸ್ಟ್‌ ಮಾಡಿ ನ್ಯಾಯಾಂಗ ಬಂಧನದಲ್ಲಿ ಇರಿಸಲಾಗಿತ್ತು.

ಹೊರಗೆ ಬಂದಿರುವ ಸೋನು ಗೌಡ ಜೈಲಿನ ವಾಸದ ಬಗ್ಗೆ ಮಾತನಾಡಿದ್ದಾರೆ. ಜೈಲಿನಲ್ಲಿ ಅನುಭವ ಕೆಟ್ಟದಾಗಿತ್ತು. ಆದರೆ ಅಲ್ಲಿಂದ ಕಲಿತ ಪಾಠವನ್ನು ನಾನು ಎಂದಿಗೂ ಮರೆಯೋದಿಲ್ಲ. ನಾಲ್ಕು ಗೋಡೆ ಮಧ್ಯ ಇರೋದು ತುಂಬಾ ಕಷ್ಟ. ಅಲ್ಲಿ ಎಂಥೆಂಥದ್ದೋ ಕ್ರೈಮ್‌ ಮಾಡಿ ಬಂದವರು ಇದ್ದಾರೆ ಅವರ ಜೊತೆ ನಾನು ಇದ್ದೆ. ಮೂರು ದಿನಕ್ಕೆ ಒಂದು ಬಾರಿ ಫೋನ್‌ ಕೊಡ್ತಾರೆ. ಐದು ನಿಮಿಷ ಮಾತಾಡೋಕೂ ಬಿಡೋದಿಲ್ಲ.

ಮೂರು ದಿನ ಒಂದು ಫೋನ್‌ ಕಾಲ್‌ಗೆ ಕಾಯಬೇಕು, ಐದು ನಿಮಿಷದೊಳಗೆ ಮಾತು ಮುಗಿಸಬೇಕು, ಸಮಯದ ಮಹತ್ವ ಹಾಗೂ ಜನರ ಬೆಲೆ ಗೊತ್ತಾಗಿದೆ. ಅತಿಯಾಗಿ ಸೊಳ್ಳೆ ಬೇರೆ, ಯಾವ ರೋಗ ಬರದೆ ಹೊರಗೆ ಬಂದಿರುವುದು ಖುಷಿ ಎಂದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!