ಹೊಸದಿಗಂತ ಡಿಜಿಟಲ್ ಡೆಸ್ಕ್:
ಕನ್ನಡಿಗರ ಕುರಿತು ವಿವಾದಾತ್ಮಕ ಹೇಳಿಕೆ ನೀಡಿ ಭಾರೀ ಆಕ್ರೋಶಕ್ಕೆ ಗುರಿಯಾದ ಗಾಯಕ ಸೋನು ನಿಗಮ್ ಅವರನ್ನು ಕನ್ನಡ ಚಿತ್ರರಂಗದಿಂದ ಬ್ಯಾನ್ ಮಾಡಲಾಗಿತ್ತು. ಇದಾದ ಬಳಿಕ ಇನ್ಸ್ಟಾಗ್ರಾಮ್ ನಲ್ಲಿ Sorry Karnataka ಎಂಬ ಪೋಸ್ಟ್ ಕೂಡ ಹಾಕಿದ್ದರು.
ಇದಿಗ ಈ ಬಗ್ಗೆ ನಟ ಡಾಲಿ ಧನಂಜಯ್ ಅಭಿಪ್ರಾಯ ಹಂಚಿಕೊಂಡಿದ್ದಾರೆ. ನಾಡು ನುಡಿಗೆ ಎಲ್ಲರೂ ನಿಂತುಕೊಳ್ಳಲೇ ಬೇಕು. ಸೋನು ನಿಗಮ್ ಕೂಡ ಕನ್ನಡದ ಮೇಲೆ ಕಾಳಜಿ ಇರುವಂತಹ ವ್ಯಕ್ತಿ. ಆ ಸಂದರ್ಭದಲ್ಲಿ ಈ ರೀತಿ ಹೇಳಿರಬಹುದು.
ಅವರ ಹಾಡುಗಳನ್ನೆಲ್ಲ ನಾವು ಕೂಡ ಎಂಜಾಯ್ ಮಾಡಿದ್ದೇವೆ. ಕನ್ನಡ ಅಂತ ಬಂದಾಗ, ನಾನು ಕನ್ನಡದ ಪರ ನಿಂತು ಕೊಳ್ಳುತ್ತೇನೆ. ನಿಲ್ಲಲೇ ಬೇಕು. ಕನ್ನಡವೇ ಸತ್ಯ. ಕನ್ನಡವೇ ನಿತ್ಯ. ಕನ್ನಡವೇ ನಮಗೆ ಅನ್ನ, ಜೀವ ಎಂದರು.