ಆಪತ್ಬಾಂಧವ ಸೋನು ಸೂದ್:‌ 16 ತಿಂಗಳ ಪುಟ್ಟ ಬಾಲಕನ ರಕ್ಷಣೆಗೆ ನಿಂತ ನಟ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ನಟನಾಗಿ, ಸಮಾಜ ಮುಖಿ ಕಾರ್ಯಕ್ರಮಗಳ ಮೂಲಕ ಜನರ ಹೃದಯದಲ್ಲಿ ಅಚ್ಚಳಿಯದಂತೆ ಹೆಸರು ಮಾಡಿರುವ ಸೋನು ಸೂದ್‌. ಪುಟ್ಟ ಮಗುವಿನ ಜೀವ ಉಳಿಸುವ ಮೂಲಕ ಮತ್ತೆ ಜನರ ಮನಸಲ್ಲಿ ಆಪತ್ಭಾಂಧವ ಎನಿಸಿಕೊಂಡಿದ್ದಾರೆ.

ಮಹಾರಾಷ್ಟ್ರದ ನಾಗ್ಪುರದ 16 ತಿಂಗಳ ಮಗು ವಿಹಾನ್, ಸ್ಪೈನಲ್ ಮಸ್ಕ್ಯುಲರ್ ಅಟ್ರೋಫಿ ಎಂಬ ಅಪರೂಪದ ಕಾಯಿಲೆಯಿಂದ ಬಳಲುತ್ತಿದ್ದಾರೆ. ಬೆನ್ನುಮೂಳೆಯ ಸ್ನಾಯು ಕ್ಷೀಣತೆ ಈ ರೋಗದ ಲಕ್ಷಣವಾಗಿದ್ದು, ರೋಗಕ್ಕೆ ʻಜೋಲ್ ಗೆಂಜ್ ಮಾʼ ಎಂಬ ಚುಚ್ಚುಮದ್ದಿನ ಅಗತ್ಯವಿದೆ. ಅಮೆರಿಕದಲ್ಲಿ ಸಿಗುವ ಈ ಚುಚ್ಚುಮದ್ದಿಗೆ 16 ಕೋಟಿ ವೆಚ್ಚ ಮಾಡಬೇಕಿದೆ. ಬಾಲಕನ ಪೋಷಕರು ಬಡವರಾದ್ದರಿಂದ ಪುಟ್ಟ ಮಗುವಿನ ಜೀವ ರಕ್ಷಣೆಗೆ ಸೋನು ಸೂದ್‌ ಮುಂದಾಗಿದ್ದಾರೆ. ಚಿಕಿತ್ಸೆಗೆ ಅವಶ್ಯಕತೆಯಿದ್ದ 16 ಕೋಟಿ ಹಣ ಸಂಗ್ರಹಿಸಲು ಪ್ರಯತ್ನಿಸುತ್ತಿದ್ದಾರೆ.

ಬಾಲಿವುಡ್ ನಟ ಅಭಿಷೇಕ್ ಬಚ್ಚನ್ ಮತ್ತು ಮನೋಜ್ ಜಬ್ಬಾಯಿ ಈ ಮಗುವಿಗೆ ಸಹಾಯ ಮಾಡಲು ಮುಂದೆ ಬಂದಿದ್ದಾರೆ. ಸಾಮಾಜಿಕ ಮಾಧ್ಯಮದ ಮೂಲಕ ಮಗುವಿನ ಪೋಷಕರು ದೇಣಿಗೆ ಸಂಗ್ರಹ ಕಾರ್ಯದಲ್ಲಿ ತೊಡಗಿದ್ದಾರೆ. ಇದುವರೆಗೂ 4 ಕೋಟಿ ದೇಣಿಗೆ ಸಂಗ್ರಹವಾಗಿದೆ. ಇದರಲ್ಲಿ ಸೋನು ಸೂದ್ ಅವರ ದೇಣಿಗೆಯೇ ಹೆಚ್ಚು ಎಂದು ಮಗುವಿನ ಪೋಷಕರು ತಿಳಿಸಿದ್ದಾರೆ. ವಿಹಾನ್ ಚಿಕಿತ್ಸೆಗಾಗಿ ಈ ತಿಂಗಳ ಒಳಗಾಗಿ 12 ಕೋಟಿ ಹಣ ಜಮಾ ಮಾಡಬೇಕಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!