Saturday, December 9, 2023

Latest Posts

ಅನಾಥ ಮಕ್ಕಳ ಭವಿಷ್ಯಕ್ಕಾಗಿ ಸೋನುಸೂದ್ ಇಂಟರ್‌ನ್ಯಾಷನಲ್‌ ಪಬ್ಲಿಕ್‌ ಸ್ಕೂಲ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಚಿತ್ರನಟ ಸೋನುಸೂದ್ ಸಹೃದಯಿ, ಬಡವರ ಪಾಲಿನ ದೇವರು, ಅನ್ನದಾತ. ಕೊರೋನಾ ಸಮಯದಲ್ಲಿ ಹಲವಾರು ಸೇವಾ ಕಾರ್ಯಕ್ರಮಗಳನ್ನು ಮಾಡುವ ಮೂಲಕ ದೇಶಾದ್ಯಂತ ಜನಪ್ರಿಯರಾಗಿದ್ದರು. ಬಡವರಿಗೆ ಆಹಾರ, ಮನೆ, ಬಟ್ಟೆ ಮುಂತಾದ ಮೂಲಭೂತ ಅವಶ್ಯಕತೆಗಳಿಗೆ ಸಹಾಯ ಮಾಡಿದ್ದಾರೆ. ಕೆಲವು ವಿದ್ಯಾರ್ಥಿಗಳಿಗೆ ಶಿಕ್ಷಣದಲ್ಲಿ, ಕೆಲವರಿಗೆ ಕಷ್ಟಪಟ್ಟು ದುಡಿಯಲು ವ್ಯಾಪಾರದಲ್ಲಿ, ಕೆಲವರಿಗೆ ಉದ್ಯೋಗ ಒದಗಿಸುವಲ್ಲಿ…ಹೀಗೆ ನೂರಾರು ಜನಸೇವಾ ಕಾರ್ಯಕ್ರಮಗಳು. ಸೋನುಸೂದ್ ಕೊರೋನಾ ನಂತರವೂ ಹಲವು ಸೇವಾ ಕಾರ್ಯಕ್ರಮಗಳನ್ನು ಮುಂದುವರೆಸುತ್ತಿದ್ದಾರೆ.

ಇವರಿಂದ ಪ್ರೇರೇಪಿತರಾದವರು ಇದೀಗ ಬಿಹಾರದ 27 ವರ್ಷದ ಇಂಜಿನಿಯರ್, ಬೀರೇಂದ್ರ ಕುಮಾರ್ ಮಹಥೋ ಅವರು ಅನಾಥರಿಗಾಗಿ ಸೋನುಸೂದ್ ಇಂಟರ್ನ್ಯಾಷನಲ್ ಸ್ಕೂಲ್ ಅನ್ನು ಸ್ಥಾಪಿಸಿದ್ದಾರೆ. ಈ ಶಾಲೆಯಲ್ಲಿ ಈಗಾಗಲೇ 100 ಮಕ್ಕಳಿದ್ದಾರೆ. ದೇಣಿಗೆಯ ಮೇಲೆ ಶಾಲೆ ನಡೆಯುತ್ತಿದೆ. ಈ ವಿಷಯ ಸೋನುಸೂದ್ ಗೆ ತಿಳಿದ ನಂತರ ಸೋನುಸೂದ್ ಬಿಹಾರಕ್ಕೆ ತೆರಳಿದ್ದರು.

ಸೋನುಸೂದ್ ಬಿಹಾರಕ್ಕೆ ಹೋಗಿ ಬೀರೇಂದ್ರ ಕುಮಾರ್ ಮಹತ್ ಅವರನ್ನು ಭೇಟಿಯಾಗಿ ಅವರೊಂದಿಗೆ ಚರ್ಚಿಸಿದ ಬಳಿಕ ಅಲ್ಲಿನ ಮಕ್ಕಳಿಗೆ ಉತ್ತಮ ವಸತಿ, ಶಿಕ್ಷಣ, ಊಟ, ಹೆಚ್ಚಿನ ಅನಾಥ ಮಕ್ಕಳನ್ನು ಸೇರಿಸಲು ಹಾಗೂ ಸೋನುಸೂದ್ ಇಂಟರ್‌ನ್ಯಾಶನಲ್ ಶಾಲೆಗೆ ಹೊಸ ಕಟ್ಟಡ ನಿರ್ಮಿಸಲು ಅಗತ್ಯವಿರುವ ಎಲ್ಲ ಸೌಲಭ್ಯಗಳನ್ನು ಒದಗಿಸುವುದಾಗಿ ತಿಳಿಸಿದರು. ಇನ್ನು ಮುಂದೆ ಬೀರೇಂದ್ರ ಕುಮಾರ್ ಮಹತೋ ಅವರೊಂದಿಗೆ ಕೆಲಸ ಮಾಡುವುದಾಗಿ ಸೋನುಸೂದ್ ಹೇಳಿದ್ದಾರೆ. ಅಲ್ಲಿನ ಮಕ್ಕಳೊಂದಿಗೆ ಮಾತನಾಡುತ್ತಿರುವ ಕೆಲವು ಫೋಟೋಗಳನ್ನು ಸೋನುಸೂದ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!